ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗಮಂಡಲ: ಅರಣ್ಯ ಸಿಬ್ಬಂದಿ ಗುಂಡಿಗೆ ಒಬ್ಬ ಬಲಿ

ನಕ್ಸಲ್‌ ಚಟುವಟಿಕೆ ಪ್ರದೇಶ; ಅರಣ್ಯದಲ್ಲಿ ಕರ್ನಾಟಕ ಪೊಲೀಸ್‌ ಶೋಧ
Last Updated 12 ಡಿಸೆಂಬರ್ 2018, 12:36 IST
ಅಕ್ಷರ ಗಾತ್ರ

ಕಾಸರಗೋಡು: ಭಾಗಮಂಡಲ ಕರ್ನಾಟಕದ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಬೇಟೆಗೆ ತೆರಳಿದ್ದ ಕಾಸರಗೋಡು ಜಿಲ್ಲೆಚಿತ್ತಾರಿಕ್ಕಲ್‌ನ ಯುವಕ ಅರಣ್ಯ ಪಾಲಕರ ಗುಂಡೇಟಿಗೆ ಮೃತಪಟ್ಟಿದ್ದಾನೆ.

ತಾನಿಕ್ಕಲ್ ಕೊಚ್ಚು ಆಲಿಯಾಸ್ಜೋರ್ಜ್ ವರ್ಗೀಸ್ (48) ಮೃತರು. ಇವರ ಸಹವರ್ತಿಗಳಾಗಿ ಬೇಟೆಗೆ ಹೋಗಿದ್ದ ಅಶೋಕನ್ ಮತ್ತು ಚಂದ್ರನ್ಎಂಬುವವರನ್ನು ಅರಣ್ಯ ಸಿಬ್ಬಂದಿ ಬಂಧಿಸಿದ್ದಾರೆ.

ಚಿತ್ತಾರಿಕಲ್ ನಿಂದ 3ಕಿ.ಮೀ.ದೂರದಲ್ಲಿರುವ ಕರ್ನಾಟಕ ರಾಜ್ಯದ ಭಾಗಮಂಡಲ ರಕ್ಷಿತಾರಣ್ಯ ವ್ಯಾಪ್ತಿಗೆ ಒಳಪಟ್ಟ ಪ್ರದೇಶದಲ್ಲಿ ಬೇಟೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಅರಣ್ಯ ಮಧ್ಯದಲ್ಲಿ ಕಂಡ ಇವರತ್ತ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ಗುಂಡುಹಾರಿಸಿದ್ದರು. ಗುಂಡು ಜೋರ್ಜ್ ಎದೆಗೆ ತಗಲಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

‘ಭಾಗ ಮಂಡಲ ರಕ್ಷಿತಾರಣ್ಯ ಪ್ರದೇಶಗಳಲ್ಲಿ ನಕ್ಸಲರು, ಉಗ್ರಗಾಮಿಗಳ ಬೆದರಿಕೆ ಇದ್ದು ,ಅರಣ್ಯ ಸಿಬ್ಬಂದಿ ಹೆಚ್ಚಿನ ನಿಗಾ ಇರಿಸಿದ್ದರು. ಕರ್ನಾಟಕ ಪೊಲೀಸರು ಅರಣ್ಯದಲ್ಲಿ ಹೆಚ್ಚಿನ ತಪಾಸಣೆ ನಡೆಸುತ್ತಿದ್ದಾರೆ. ಚಿತ್ತಾರಿಕ್ಕಲ್ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದರೂ , ತಮ್ಮ ವ್ಯಾಪ್ತಿ ಪ್ರದೇಶ ಅಲ್ಲದೆ ಇರುವುದರಿಂದ ಹೆಚ್ಚಿನ ಕ್ರಮ ಕೈಗೊಳ್ಳಲು ಸಾಧ್ಯ ಇಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT