l ಆಳ ಸಮುದ್ರದ ಮತ್ಸ್ಯ ಶಿಕಾರಿಗೆ ತೆರಳಿದ ಶೇ 15–20ರಷ್ಟು ಬೋಟ್ಗಳಿಗೆ ಮಾತ್ರ ಬಲೆಗೆ ಮೀನು ಸಿಗುತ್ತಿದೆ, ಇನ್ನುಳಿದ ಬೋಟ್ಗಳ ಖಾಲಿ ಬಲೆಯೊಂದಿಗೆ ಮರಳುವಂತಾಗಿದೆ ಎನ್ನುತ್ತಾರೆ ಮೀನುಗಾರರು. ಈ ಸಮಸ್ಯೆಗೆ ಕಾರಣವೇನು?

ಚೇತನ್ ಬೆಂಗ್ರೆ: ಇದು ಹೊಸ ವಿದ್ಯಮಾನವೇನಲ್ಲ. ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಇಲ್ಲಿನ ಮೀನುಗಾ ರರಿಗೆ ಭರ್ಜರಿ ಫಸಲು ದೊರೆತಿದೆ. ಕೆಲವೊಮ್ಮೆ ಬೋಟ್ಗಳು ಚೆನ್ನಾಗಿದ್ದು, ಸಕಲ ವ್ಯವಸ್ಥೆಗಳು ಇದ್ದರೂ, ಬಲೆಯಲ್ಲಿ ಸೆರೆ ಹಿಡಿಯುವ ತಜ್ಞತೆ ಇಲ್ಲದಿದ್ದರೆ, ಬರಿಗೈಯಲ್ಲಿ ಬರಬೇಕಾದ ಸಂದರ್ಭ ಬರುತ್ತದೆ. ಕಡಲ ಶಿಕಾರಿಯಲ್ಲಿ ಅದೃಷ್ಟವೂ ಕೂಡಿಬರಬೇಕು ಎಂದು ನಮ್ಮ ಹಿರಿಯರು ಹೇಳು ತ್ತಾರೆ. ಹಿಂದೆ, 40 ನಾಟಿಕಲ್ ಮೈಲು ದೂರದವರೆಗೆ ತೆರಳಿದರೆ ಪರ್ಸಿನ್, ಟ್ರಾಲ್ ಬೋಟ್ಗಳಿಗೆ ಭರ್ಜರಿ ಫಸಲು ಸಿಗುತ್ತಿತ್ತು. ಈ ಭಾರಿ ಅಧಿಕ ಉಷ್ಣಾಂಶವೂ ಕಾರಣವಾಗಿರಬಹುದು.

l ಎಲ್ನಿನೊ ಪ್ರಭಾವ, ತಾಪಮಾನ ಹೆಚ್ಚಳದ ಕಾರಣಕ್ಕೆ ಮತ್ಸ್ಯ ಕ್ಷಾಮ ಉಂಟಾಗ ಬಹುದೇ? ಅಥವಾ ಕಡಲ ಮಾಲಿನ್ಯ ಮೀನು ಸಂತತಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆಯೇ?

ಪ್ರೊ. ಎಚ್.ಎನ್.ಆಂಜನೇಯಪ್ಪ: ಸಾಂಪ್ರದಾಯಿಕ ಮೀನುಗಾರರಲ್ಲಿ ಮೀನಿನ ನೆಲೆ ಗುರುತಿಸುವ ಕೌಶಲ ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಟ್ರಾನ್ಸ್ಪಾಂಡರ್ ಇನ್ನಿತರ ಆಧುನಿಕ ಉಪಕರಣಗಳು ಮೀನಿನ ನೆಲೆ ಗುರುತಿಸಲು ಮೀನುಗಾರರಿಗೆ ಸಹಕಾರಿಯಾಗಿವೆ. ವಾತಾವರಣದಲ್ಲಿ ಉಷ್ಣತೆ ಹೆಚ್ಚಾದಾಗ ಮೀನುಗಳು ನೀರಿನಾಳಕ್ಕೆ ಚಲಿಸುತ್ತವೆ. ಈ ಎಲ್ಲ ಅಂಶಗಳನ್ನು ತಿಳಿದುಕೊಂಡು ಮೀನು ಶಿಕಾರಿ ಮಾಡಿದರೆ, ಬರದ ಭಯ ಬರಲಾರದು. ಕೈಗಾರಿಕಾ ತ್ಯಾಜ್ಯಗಳು ನೇರವಾಗಿ ಕಡಲಿಗೆ ಸೇರಿನ ನೀರನ್ನು ಮಲೀನಗೊಳಿಸುತ್ತಿವೆ. ರಾಸಾಯನಿಕ ಬೆರೆತ ನೀರಿನಲ್ಲಿ ಜೀವಿಸಲಾಗದೆ ಮೀನುಗಳು ಬೇರೆಡೆ ಚಲಿಸುತ್ತವೆ ಅಥವಾ ಕಣ್ಮರೆಯಾಗುತ್ತವೆ. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಅಗತ್ಯವಾಗಿದೆ.

l ಲೈಟ್ ಫಿಷಿಂಗ್, ಬುಲ್ ಟ್ರಾಲಿಂಗ್ ಮೀನುಗಾರಿಕೆ ನಿಷೇಧವಿದೆ. ಆದರೆ, ಆಳ ಸಮುದ್ರಕ್ಕೆ ತೆರಳುವ ಕೆಲವು ಬೋಟ್ಗಳು ಅನಧಿಕೃತವಾಗಿ ಇವನ್ನು ಬಳಸುತ್ತವೆ ಎಂಬ ಆರೋಪವಿದೆ. ಯಾಕೆ ಈ ಬಗ್ಗೆ ಕಠಿಣ ಕ್ರಮಗಳು ಜಾರಿಯಾಗುತ್ತಿಲ್ಲ?

ಚೇತನ್ ಬೆಂಗ್ರೆ: ಇವೆರಡೂ ರೀತಿಯಲ್ಲಿ ಮೀನು ಬೇಟೆ ಮಾಡುವುದನ್ನು ನಾನು ವಿರೋಧಿಸುತ್ತೇನೆ. ನಮ್ಮ ಹಿರಿಯರು ನಮಗೆ ಈ ರೀತಿಯ ಅಡ್ಡದಾರಿಯನ್ನು ಕಲಿಸಿಲ್ಲ. ಅವರು ಉಳಿಸಿಟ್ಟ ಕಡಲಖಜಾನೆಯನ್ನು ನಾವು ಮುಂದಿನ ತಲೆಮಾರಿಗೆ ದಾಟಿಸಬೇಕು. ದೇಶದ ಎಲ್ಲ ಪಶ್ಚಿಮ ಕರಾವಳಿಯಲ್ಲಿ ಏಕರೂಪದ ನಿಯಮ ಜಾರಿಯಾಗಬೇಕು.

l ಲೈಟ್ ಫಿಷಿಂಗ್, ಬುಲ್ ಟ್ರಾಲಿಂಗ್ ಮೀನುಗಾರಿಕೆಯ ದೀರ್ಘಕಾಲೀನ ದುಷ್ಪರಿಣಾಮಗಳೇನು?

ಪ್ರೊ. ಎಚ್.ಎನ್.ಆಂಜನೇಯಪ್ಪ: ಪ್ರಖರ ಬೆಳಕಿಗೆ ಸಣ್ಣ ಮೀನುಗಳು ಹೆಚ್ಚು ಆಕರ್ಷಿತವಾಗುತ್ತವೆ. ಪ್ರೌಢಾವಸ್ಥೆಗೆ ಬರುವ ಮೊದಲೇ ಮರಿಯನ್ನು ಹಿಡಿದರೆ, ಮೀನು ಸಂತತಿ ವೃದ್ಧಿಗೆ ಹಿನ್ನಡೆಯಾಗುತ್ತದೆ. ಸಂಖ್ಯೆಯ ಜೊತೆಗೆ ಮೀನಿನ ಗಾತ್ರ, ತೂಕ ಹೆಚ್ಚಳ ಇರುವುದೂ ಮುಖ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಬುಲ್ ಟ್ರಾಲಿಂಗ್, ಲೈಟ್ ಫಿಷಿಂಗ್ ಮಾಡಬಾರದು.

l ಪ್ರಸ್ತುತ ಇರುವ ಮೀನುಗಾರಿಕೆ ನಿಷೇಧದ ಅವಧಿಯನ್ನು ಎರಡು ತಿಂಗಳುಗಳಿಂದ 90 ದಿನಗಳಿಗೆ ವಿಸ್ತರಣೆ ಮಾಡುವುದರಿಂದ ಆಗುವ ಪ್ರಯೋಜನಗಳು ಏನು?

ಚೇತನ್ ಬೆಂಗ್ರೆ: ಕೇಂದ್ರ ಸರ್ಕಾರವು ಪಶ್ಚಿಮ ಕರಾವಳಿಯ ಎಲ್ಲ ರಾಜ್ಯಗಳ ಸಚಿವರ ಸಭೆ ನಡೆಸಿ, ಏಕರೂಪದ ನಿಯಮ ಜಾರಿಗೊಳಿಸಬೇಕು. ಜೂನ್ನಿಂದ ಆಗಸ್ಟ್ವರೆಗೆ ಮೀನುಗಾರಿಕೆ ನಿಷೇಧ ಜಾರಿಯಾಗಲಿ. ನಿರಂತರ ನಿಗಾವಹಿಸುವ ಜೊತೆಗೆ, ನಿಯಮ ಪಾಲನೆ ಮಾಡದವರನ್ನು ಬಂಧಿಸುವಂತಹ ಕಠಿಣ ಕ್ರಮ ಜಾರಿಯಾಗಬೇಕು.

ಪ್ರೊ. ಎಚ್.ಎನ್.ಆಂಜನೇಯಪ್ಪ: ಮೀನುಗಾರಿಕೆ ನಿಷೇಧದ ಅವಧಿ ಮೂರು ತಿಂಗಳಿಗೆ ವಿಸ್ತರಣೆಯಾದರೆ ಅತೀ ಉತ್ತಮ. ಇದರಿಂದ ಮತ್ಸ್ಯ ಸಂಪತ್ತು ಹೆಚ್ಚುವ ಜೊತೆಗೆ, ಮತ್ಸ್ಯೋದ್ಯಮದ ಭವಿಷ್ಯ ಉಜ್ವಲವಾಗುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-29-332649548

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.