ಗುರುವಾರ , ಏಪ್ರಿಲ್ 22, 2021
22 °C

ಹಾಸನದ ಐದು ತಿಂಗಳ‌ ಮಗು ಮಾರಾಟ: ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮೂರು–ನಾಲ್ಕು ತಿಂಗಳ ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಈತನೊಂದಿಗೆ ಮತ್ತಿಬ್ಬರು ಮಹಿಳೆರನ್ನೂ ವಶಕ್ಕೆ ಪಡೆಯಲಾಗಿದೆ.

ಮೂಲ್ಕಿ ನಿವಾಸಿ ರಾಯನ್ (30) ಬಂಧಿತ ಆರೋಪಿ. ಈತನನ್ನು ಮಂಗಳೂರಿನ ಕದ್ರಿಯ ಹೋಟೆಲ್ ಒಂದರಲ್ಲಿ ಸೆರೆ ಹಿಡಿಯಲಾಗಿದೆ.

ಮಗುವನ್ನು ಖರೀದಿಸಿ ಮಾರಾಟ ಮಾಡಿದ ಕವಿತಾ ಮತ್ತು ಕವಿತಾಳಿಂದ ಮಗು ಖರೀದಿಸಿದ ಮರಿಯಮ್ಮಳನ್ನು ವಶಕ್ಕೆ ಪಡೆಯಲಾಗಿದೆ.

ರಯಾನ್ ಹಾಸನದ ಸುಮಾರು ಐದು ತಿಂಗಳ ಮಗುವನ್ನು ಕಾರ್ಕಳದ ಕವಿತಾರಿಗೆ ಸುಮಾರು ₹ 5 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಮಗುವನ್ನು ಖರೀದಿಸಿದ ಕವಿತಾ ಅದನ್ನು ಮತ್ತೆ ಮರಿಯಮ್ಮ ಎಂಬುವವಳಿಗೆ ಮಾರಾಟ ಮಾಡಿದ್ದಾಳೆ. ಸದ್ಯ ಕವಿತಾ ಮತ್ತು ಮರಿಯಮ್ಮಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ತಿಳಿಸಿದ್ದಾರೆ.

ಆರೋಪಿಗಳಿಂದ‌ ಒಂದು ಮಗುವನ್ನು ರಕ್ಷಿಸಲಾಗಿದೆ. ಮಕ್ಕಳ ಮಾರಾಟದ‌ ಜಾಲದ‌ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು