ನೆರಿಯ: ಭಾರಿಮಳೆಗೆ ಗುಡ್ಡ ಕುಸಿತ, ತೋಟಗಳಿಗೆ ನುಗ್ಗಿದ ನೆರೆ ನೀರು

7

ನೆರಿಯ: ಭಾರಿಮಳೆಗೆ ಗುಡ್ಡ ಕುಸಿತ, ತೋಟಗಳಿಗೆ ನುಗ್ಗಿದ ನೆರೆ ನೀರು

Published:
Updated:

ಉಜಿರೆ : ನೆರಿಯ ಗ್ರಾಮದ ಗಂಡಿಬಾಗಿಲು ಪಿಲತ್ತಡಿ ಎಂಬಲ್ಲಿ ಗುಡ್ಡ ಕುಸಿದು ಮನೆಗೆ ಹಾನಿಯಾಗಿದೆ. ಗಾಳಿ ಮಳೆಗೆ  ರಬ್ಬರು, ತೆಂಗು, ಅಡಿಕೆ ಗಿಡಗಳೂ ಧರೆಗುರುಳಿವೆ. ಕಕ್ಕಿಂಜೆ - ನೆರಿಯಾ ರಸ್ತೆ ಸಂಪರ್ಕ ಕಡಿತಗೊಂಡಿದೆ. ತೋಟತ್ತಾಡಿ ಗ್ರಾಮದಲ್ಲಿಯೂ ಗುಡ್ಡ ಕುಸಿತಗೊಂಡಿದೆ.

ವಸಂತ ಪೂಜಾರಿ ಹಾಗೂ ನೋಣಯ್ಯ ಗೌಡ ಎಂಬವರ ಮನೆಯ ಗೋಡೆ ಗುರುವಾರ ಕುಸಿದು ಬಿದ್ದಿದೆ. ಮುಂಡಾಜೆ - ಧರ್ಮಸ್ಥಳ ರಸ್ತೆಯಲ್ಲಿಯೂ ಭೂ ಕುಸಿತವಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಶಾಸಕ ಹರೀಶ್ ಪೂಂಜ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.

ಧರ್ಮಸ್ಥಳ, ನಿಡಿಗಲ್ ಹಾಗೂ ಮುಂಡಾಜೆಯಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ತೋಟಗಳಿಗೆ ನುಗ್ಗಿ ಕೃಷಿಗೆ ಹಾನಿಯಾಗಿದೆ.

ಬಳಂಜ, ಕೊಯ್ಯೂರು, ಪಟ್ರಮೆ ಮೊದಲಾದ ಕಡೆ ಮೂವತ್ತಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ ಎಂದು ಮೆಸ್ಕಾಂ ಘಟಕದ ಎಂಜಿನಿಯರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !