ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೈಕ್ಷಣಿಕ ಯಶಸ್ಸಿಗೆ ಪಂಚ ಸೂತ್ರ ಪಾಲಿಸಿ: ವೆಂಕಟರಮಣ ಆಚಾರ್ ಸಲಹೆ

Published : 5 ಆಗಸ್ಟ್ 2024, 6:01 IST
Last Updated : 5 ಆಗಸ್ಟ್ 2024, 6:01 IST
ಫಾಲೋ ಮಾಡಿ
Comments

ಮಂಗಳೂರು: ‘ವಿದ್ಯಾರ್ಥಿಯು ಶಿಕ್ಷಣದಲ್ಲಿ ಯಶಸ್ಸನ್ನು ಕಾಣಬೇಕಾದರೆ, ಕಾಗೆಯಂತೆ ಕ್ಷಣಾರ್ಧದ ಸ್ನಾನ,  ಪಾಠದ ಬಗ್ಗೆ ಬಕ ಪಕ್ಷಿಯಂತಹ ಧ್ಯಾನ, ಶ್ವಾನದ ತೆರನಾದ ಜಾಗೃತ ನಿದ್ದೆ, ಮಿತ ಆಹಾರ ಸೇವನೆ ಹಾಗೂ ಗೃಹ ತ್ಯಾಗ ( ಮನೆ ವಿಚಾರಕ್ಕೆ ತಲೆಹಾಕದಿರುವುದು) ... ಈ ಪಂಚ ಸೂತ್ರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಜಿಪ ನಡು ಸರ್ಕಾರಿ ಶಾಲೆಯ ಅಧ್ಯಾಪಕ ವೆಂಕಟರಮಣ ಆಚಾರ್ ಸಲಹೆ ನೀಡಿದರು.

ಇಲ್ಲಿನ ರಥಬೀದಿಯ ಕಾಳಿಕಾಂಬಾ ಸೇವಾ ಸಮಿತಿಯ ಆಶ್ರಯದಲ್ಲಿ ಏರ್ಪಡಿಸಿದ್ದ ಕಡೇಶ್ವಾಲ್ಯ ಪ್ರೇಮಾ ಸಂಜೀವ ಆಚಾರ್ಯ ದತ್ತಿ ನಿಧಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಉಮೇಶ್ ಆಚಾರ್ಯ ಪಾಂಡೇಶ್ವರ, ದತ್ತಿ ನಿಧಿ ಸಂಸ್ಥಾಪಕ ಕಡೇಶ್ವಾಲ್ಯ ಉಮೇಶ ಆಚಾರ್ಯ ಭಾಗವಹಿಸಿದ್ದರು. ಸಮಿತಿಯ ಅಧ್ಯಕ್ಷ ಜೆ.ವಿವೇಕ್ ಅಧ್ಯಕ್ಷತೆ ವಹಿಸಿದ್ದರು.
8ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ವಿವಿಧ ತರಗತಿಗಳಲ್ಲಿ ಶಿಕ್ಷಣ ಪಡೆಯುತ್ತಿರುವ 28 ವಿದ್ಯಾರ್ಥಿಗಳಿಗೆ ದತ್ತಿ ನಿಧಿ ಪ್ರದಾನ ಮಾಡಲಾಯಿತು.

ಸೇವಾ ಸಮಿತಿಯ ಕಾರ್ಯದರ್ಶಿ ಜಗದೀಶ್ ಸಿದ್ಧಕಟ್ಟೆ ಸ್ವಾಗತಿಸಿದರು. ಪಶುಪತಿ ಉಳ್ಳಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಸೂರಜ್ ಎಂ.ಕದ್ರಿ ಧನ್ಯವಾದ ಸಮರ್ಪಿಸಿದರು. ಸುದೇಶ್ ಬಬ್ಬುಕಟ್ಟೆ ಮತ್ತು ಖಜಾಂಚಿ ಉದಯ ತೋಡಾರ್ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT