ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಆರೈಕೆಯಲ್ಲಿರುವವರಿಗೆ ಆಹಾರ ಪೂರೈಕೆ

ಕಾರ್ಯಕರ್ತರಿಂದ ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ
Last Updated 8 ಮೇ 2021, 4:58 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್ ದೃಢಪಟ್ಟು ಹೋಂ ಐಸೋಲೇಷನ್‌ನಲ್ಲಿ ಇರುವವರಿಗೆ ಎರಡು ಹೊತ್ತಿನ ಊಟಕ್ಕೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ 20ಕ್ಕೂ ಹೆಚ್ಚು ಸ್ವಯಂಸೇವಕರು, ಅಂತಹ ವ್ಯಕ್ತಿಗಳ ಮನೆಗೆ ಹೋಗಿ ಆಹಾರ ಪೊಟ್ಟಣ ನೀಡಿ ಬರುತ್ತಿದ್ದಾರೆ.

ಊಟಕ್ಕಾಗಿ ಪರದಾಡುವ ನಿರ್ಗತಿಕರು, ಕಾರ್ಮಿಕರು, ರೈಲ್ವೆ ನಿಲ್ದಾಣ ಸುತ್ತಮುತ್ತಲಿನ ಕೆಲಸಗಾರರು, ಪೊಲೀಸ್ ಚೆಕ್‌ಪೋಸ್ಟ್‌ಗಳಿಗೆ ನಿತ್ಯ ಊಟ ಪೂರೈಕೆ ಮಾಡುತ್ತಿರುವ ಇಲ್ಲಿನ ಸೇವಾಂಜಲಿ ಚಾರಿಟಬಲ್ ಟ್ರಸ್ಟ್, ಯುವಾ ಬ್ರಿಗೇಡ್ ತಂಡದೊಂದಿಗೆ ಸೇರಿ ಈ ಕಾರ್ಯ ನಡೆಸುತ್ತಿದೆ.

‘ಕೋವಿಡ್ ಹೆಚ್ಚುತ್ತಿರುವ ಕಾರಣ ಸರ್ಕಾರ ವಾರಾಂತ್ಯದ ಕರ್ಫ್ಯೂ ವಿಧಿಸಿದಾಗಿನಿಂದ ದಿನಕ್ಕೆ ಮಧ್ಯಾಹ್ನ ಹಾಗೂ ರಾತ್ರಿಯ ಊಟ ವಿತರಣೆ ಆರಂಭಿಸಿದ್ದೇವೆ. ಮಧ್ಯಾಹ್ನ ಸುಮಾರು 1,500 ಮತ್ತು ರಾತ್ರಿ 1,200 ಊಟ ವಿತರಿಸಲಾಗುತ್ತದೆ. ಇದರ ಜೊತೆಗೆ ಎರಡು ದಿನಗಳಿಂದ ಹೋಂ ಐಸೋಲೇಷನ್‌ನಲ್ಲಿ ಇರುವವರಿಗೂ ಊಟ ಒದಗಿಸಲಾಗುತ್ತಿದೆ. 50ಕ್ಕೂ ಹೆಚ್ಚು ಜನರಿಗೆ ನಿತ್ಯ ನೆರವಾಗುತ್ತಿರುವ ತೃಪ್ತಿಯಿದೆ’ ಎನ್ನುತ್ತಾರೆ ಟ್ರಸ್ಟ್ ಕಾರ್ಯದರ್ಶಿ ಹಣಮಂತ ಕಾಮತ್.

‘ಸಹಾಯವಾಣಿಗೆ ನಿತ್ಯ ನೂರಾರು ಕರೆಗಳು ಬರುತ್ತವೆ. ಬೆಂಗಳೂರಿನಿಂದ ಹೆಚ್ಚಿನ ಕರೆಗಳು ಬರುತ್ತವೆ. ಅವರಿಗೆ ಅಲ್ಲಿನ ಕಾರ್ಯಕರ್ತರ ಸಂಪರ್ಕ ಕಲ್ಪಿಸುತ್ತೇವೆ. ಮಂಗಳೂರು ನಗರ ವ್ಯಾಪ್ತಿಯವರಿಗೆ ಮನೆಗೆ ಆಹಾರ ಪೂರೈಕೆ ಮಾಡಲಾಗುತ್ತದೆ. ನಿತ್ಯ ಮೂರು ವಾಹನಗಳಲ್ಲಿ ಕಾರ್ಯಕರ್ತರು ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಅನ್ನ, ಸಾಂಬಾರು, ಪಲ್ಯ ಒಳಗೊಂಡ ಪೊಟ್ಟಣ ನೀಡುತ್ತಾರೆ. ಆರಕ್ಕೂ ಹೆಚ್ಚು ಮಹಿಳೆಯರು ಅಡುಗೆ ತಯಾರಿಸುತ್ತಾರೆ’ ಎಂದು ವಿವರಿಸಿದರು.

‘ಊಟ ವಿತರಿಸುವ ವೇಳೆ ಕದ್ರಿಯಲ್ಲಿ ರಸ್ತೆ ಬದಿಯಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರು ಎರಡು ದಿನಗಳಿಂದ ಊಟ ಮಾಡಿರಲಿಲ್ಲ ಎನ್ನುತ್ತಿದ್ದರು. ಅವರ ಕೈಗೆ ಆಹಾರ ಪೊಟ್ಟಣ ನೀಡಿದಾಗ, ಅವರ ಕಣ್ಣಲ್ಲಿ ಮೂಡಿದ ಹರ್ಷ, ನಮಗೆ ಕೆಲಸ ಮಾಡಲು ಸ್ಫೂರ್ತಿ’ ಎಂದು ಕಾರ್ಯಕರ್ತರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT