ಶುಕ್ರವಾರ, ಡಿಸೆಂಬರ್ 6, 2019
20 °C

ಎನ್‌ಸಿಐಬಿ ಹೆಸರಲ್ಲಿ ವಂಚನೆ: ಮತ್ತಿಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಹೆಸರು ಬಳಸಿ ದರೋ ಡೆಗೆ ಯತ್ನಿಸಿದ ಆರೋಪಿ ಸ್ಯಾಮ್ ಪೀಟರ್‌ನೊಂದಿಗೆ ವ್ಯವಹಾರ ಬೆಳೆಸಿ, ಎನ್‌ಸಿಐಬಿ ಅಧಿಕಾರಿಗಳೆಂದು ಜನರಿಗೆ ವಂಚಿಸುತ್ತಿದ್ದ ಬೆಂಗಳೂರು ನಾಗರಬಾವಿಯ ನಾಗರಾಜ ಮತ್ತು ರಾಘವೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. 

ಬಂಧಿತರಿಂದ ಎನ್‌ಸಿಐಬಿ ಬಾವುಟ, ಬೋರ್ಡ್, ಎಂಎಲ್‌ಸಿ ಪಾಸ್ ಇರುವ ಸ್ಕಾರ್ಪಿಯೋ ಕಾರು, ಐಡಿ ಹಾಗೂ ಆರೋಪಿಗಳಿಂದ ದಾಖ ಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ವಿಧಾನ ಪರಿಷತ್ ಸದಸ್ಯರೊಬ್ಬರ ವಿಧಾನಸೌಧ ವಾಹನ ಪಾಸ್ ದುರುಪಯೋಗಪಡಿ ಸಿದ ಬಗ್ಗೆ ಮಾಹಿತಿ ಲಭಿಸಿದ್ದು, ತನಿಖೆ ಮುಂದುವರಿದಿದೆ. ಆರೋಪಿಗಳಿಬ್ಬರು ಗೆಳೆಯರಾಗಿದ್ದು ಪೀಟರ್‌ನಿಂದಲೂ ಹಣ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ.

ರೈಸ್‌ಪುಲ್ಲಿಂಗ್ ವಿಚಾರದಲ್ಲಿ ರಿಯಾಜ್‌ ಎಂಬಾತನನ್ನು ಅಪಹರಿಸಿದ ಪ್ರಕರಣದ ಆರೋಪಿ ಕಲೀಂ ಬಾಬಾ ಪಟೇಲ್ ಮಹಾರಾಷ್ಟ್ರ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಶಿ ಮಠ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದಿಂದ ತನಿಖಾಧಿಕಾರಿಗಳು ಬರಲಿದ್ದಾರೆ. ಸ್ವಾಮೀಜಿಯೊಬ್ಬರನ್ನು ಬೆದರಿಸಲು ಅಥವಾ ಹತ್ಯೆ ನಡೆಸಲು ಸಂಚು ರೂಪಿಸಿದ ಕುರಿತು ತನಿಖೆ ಮುಂದುವರಿದಿದೆ. ಆರೋಪಿಗಳು ನಮೂದಿಸಿರುವ ‘ರಾಷ್ಟ್ರೀಯ ಅಪರಾಧ ತನಿಖಾ ದಳ’ (ಎನ್‌ಸಿಐಬಿ) ಎಂಬುದು ಸರ್ಕಾರೇತರ ಸಂಸ್ಥೆಯಾಗಿದ್ದು, ಈ ಸಂಸ್ಥೆಯ ನಿರ್ದೇಶಕರನ್ನು ಪೊಲೀಸರು ವಿಚಾರಣೆ ನಡೆ ಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು