ಭಾನುವಾರ, ಡಿಸೆಂಬರ್ 8, 2019
20 °C
ಗೇಲ್‌ ಕಂಪನಿ ಗ್ಯಾಸ್ ಪೈಪ್ ಲೈನ್ ಅವಾಂತರ

ಮೇರಮಜಲು: ಸ್ಥಳೀಯರಿಂದ ಕಾಮಗಾರಿ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಟ್ವಾಳ: ‘ಮೇರಮಜಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೆಟ್ಟು ಪರಿಸರದಲ್ಲಿ  ಒಂದು ವರ್ಷದಿಂದ ಗೇಲ್ ಕಂಪನಿ ವತಿಯಿಂದ ನಡೆಯುತ್ತಿರುವ ಮಂಗಳೂರು-ಕೊಚ್ಚಿ ಗ್ಯಾಸ್ ಪೈಪ್ ಲೈನ್ ಕಾಮಗಾರಿಯಿಂದ ಭತ್ತದ ಕೃಷಿ ಮತ್ತು ಖಾಸಗಿ ಜಮೀನುಗಳಿಗೆ ಹಾನಿ ಉಂಟಾಗಿದೆ’ ಎಂದು ಸ್ಥಳೀಯರು ದೂರಿದ್ದಾರೆ.‌

‘ಇದೇ ಕಾರಣ ನೀಡಿ ಸ್ಥಳೀಯರು ಒಟ್ಟಾಗಿ ಭಾನುವಾರ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ’ ಎಂದು ಸ್ಥಳೀಯ ಕೃಷಿಕ ಪದ್ಮನಾಭ ಕೋಟ್ಯಾನ್ ತಿಳಿಸಿದ್ದಾರೆ. ತ್ತದ ಕೃಷಿ ಮತ್ತು ಕೆಲವು ಮನೆಗಳ ಕಾಂಪೌಂಡ್‌ಗಳಿಗೆ ಪೈಪ್ ಲೈನ್ ಕಾಮಗಾರಿ ನೆಪದಲ್ಲಿ ಹಾನಿ ಉಂಟು ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮೇರಮಜಲು ಪರಿಸರದ ನೂರಾರು ಮನೆಗಳ ಪೈಕಿ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರಧನ ನೀಡಲಾಗಿದ್ದು, ಇಲ್ಲಿನ ಬಂಡೆಗಳನ್ನು ಸಿಡಿಸಲು ಉಪಯೋಗಿಸುವ ಸ್ಫೋಟಕಗಳಿಂದ ಹಲವಾರು ಮನೆಗಳಿಗೆ ಹಾನಿ ಉಂಟಾಗಿದೆ. ಕೃಷಿಯೂ ಹನಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)