ಮಹಿಳೆಗೆ ಗ್ಯಾಂಗ್‌ರೇಪ್ ಬೆದರಿಕೆ: ದೂರು
ಮಂಗಳೂರು: ಬಿಜೆಪಿಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಸಾಮಾಜಿಕ ಕಾರ್ಯಕರ್ತೆಯೊಬ್ಬರಿಗೆ ಫೇಸ್‌ಬುಕ್‌ನಲ್ಲಿ ಗ್ಯಾಂಗ್‌ರೇಪ್ ಬೆದರಿಕೆ ಹಾಕಲಾಗಿದ್ದು, ಈ ಕುರಿತು ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಕಾರ್ಯರ್ತೆಯೊಬ್ಬರು ಇತ್ತೀಚಿನ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿ ಹೇಳಿಕೆಯೊಂದನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ವ್ಯಕ್ತಿಯೊಬ್ಬ ಇಂಥವರನ್ನು ಗ್ಯಾಂಗ್‌ರೇಪ್ ಮಾಡಬೇಕು. ‘ಎಲ್ಲಾ ಹಿಂದೂ ಅಭಿಮಾನಿಗಳ ಅಭಿಪ್ರಾಯ ತಪ್ಪು. ತನ್ನದೇ ಅಭಿಪ್ರಾಯ ನಿಜ ಎಂದು ದೇಶದ್ರೋಹಿ ತರಹ ಮಾತನಾಡುತ್ತಾಳೆ’ ಎಂಬ ಮಾತಿನೊಂದಿಗೆ ಅವಾಚ್ಯ ಶಬ್ದಗಳನ್ನು ಉಪಯೋಗಿಸಿ ನಿಂದನಾತ್ಮಕ ಹೇಳಿಕೆಯನ್ನು ಹಾಕಿದ್ದಾನೆ.
ಇಂತಹ ವಿಕೃತ ಮನಃಸ್ಥಿತಿಯ ಕುರಿತು ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಆಕ್ಷೇಪ, ವಿರೋಧ ವ್ಯಕ್ತವಾಗಿದೆ. ಇದೀಗ ವಕೀಲೆಯೊಬ್ಬರ ನೇತೃತ್ವದಲ್ಲಿ ಮಹಿಳಾ ತಂಡ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದೆ.
ನಗರದ ವಿವಿಧ ಸಂಘಟನೆಗಳ ಪ್ರಮುಖರು ಸಾಮಾಜಿಕ ಕಾರ್ಯಕರ್ತೆಗೆ ಬೆಂಬಲ ಸೂಚಿಸಿದ್ದು, ಅತ್ಯಾಚಾರದ ಬೆದರಿಕೆ ಒಡ್ಡಿದ ವಿಕೃತ ಮನಸ್ಸಿಗರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಲಾಗಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.