ಮಂಗಳೂರು | ವಿಚಾರಣಾಧೀನ ಕೈದಿಯಲ್ಲಿ ಗಾಂಜಾ ಪತ್ತೆ

ಮಂಗಳೂರು: ಬಂಟ್ವಾಳದ ನ್ಯಾಯಾಲಯಕ್ಕೆ ಹಾಜರುಪಡಿಸಿ ಮರಳಿ ಕಾರಾಗೃಹಕ್ಕೆ ಕರೆತಂದ ವಿಚಾರಣಾಧೀನ ಕೈದಿಯ ಬಳಿ ಗಾಂಜಾ ಪತ್ತೆಯಾಗಿದ್ದು, ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮುಹಮ್ಮದ್ ಅಸ್ರು ಯಾನೆ ಮುಹಮ್ಮದ್ ಅಲಿ ಎಂಬಾತನನ್ನು ಪ್ರಕರಣವೊಂದ ರ ವಿಚಾರಣೆ ಸಲುವಾಗಿ ಬಂಟ್ವಾಳದ ನ್ಯಾಯಾಲಯಕ್ಕೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯ ಬೆಂಗಾವಲಿನೊಂದಿಗೆ ಸೋಮವಾರ ಕಳುಹಿಸಿಕೊಡಲಾಗಿತ್ತು. ಆತನನ್ನು ಮರಳಿ ಕಾರಾಗೃಹಕ್ಕೆ ಕರೆತಂದಾಗ ಮುಖ್ಯದ್ವಾರದಲ್ಲಿ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದರು. ಆಗ ಆತನ ಬಳಿ ಗಾಂಜಾ ಇದ್ದ ಪೊಟ್ಟಣ ಪತ್ತೆಯಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.