ಶುಕ್ರವಾರ, ನವೆಂಬರ್ 15, 2019
27 °C

ವಿಡಿಯೊ | ಗ್ಯಾಸ್‌ ಟ್ಯಾಂಕರ್‌ನಿಂದ ಅನಿಲ ಸೋರಿಕೆ: ಸ್ವಲ್ಪದರಲ್ಲಿ ತಪ್ಪಿದ ಅನಾಹುತ

Published:
Updated:

ಮಂಗಳೂರು: ಹಾಸನದ ಕಡೆಗೆ ಹೋಗುತ್ತಿದ್ದ ಅನಿಲ್ ಟ್ಯಾಂಕರ್‌ನ ಮೇಲ್ಘಾಗದ ವಾಲ್ವ್‌ ಏಕಾಏಕಿ ತೆರೆದುಕೊಂಡ ಪರಿಣಾಮ ಭಾರೀ ಪ್ರಮಾಣದಲ್ಲಿ ಅನಿಲ ಸೋರಿಕೆಯಾದ ಘಟನೆ ಉಪ್ಪಿನಂಗಡಿ ಸಮೀಪದ ಕರ್ವೇಲ್‌ನಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಟ್ಯಾಂಕರ್‌ನ ಮೇಲ್ಘಾಗದಿಂದ ಅನಿಲ ಹೆಚ್ಚಿನ ಒತ್ತಡದಲ್ಲಿ ಮೇಲ್ಮುಖವಾಗಿ ಚಿಮ್ಮಿತು. ಇದನ್ನು ಗಮನಿಸಿದ ತಕ್ಷಣ ಸಮೀಪದ ಕರ್ವೇಲ್ ಮಸೀದಿಯ ಧ್ವನಿವರ್ಧಕ ಬಳಸಿ ಪರಿಸ್ಥಿತಿ ವಿವರಿಸಿ ಸುರಕ್ಷತಾ ಕ್ರಮ ಅನುಸರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಯಿತು.

ಲಾರಿ ನಿಂತಿದ್ದ ಪ್ರದೇಶದ ಅಕ್ಕಪಕ್ಕದ ಮನೆಗಳವರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಯಿತು. ಪೊಲೀಸರು ಮತ್ತು ತುರ್ತು ಅನಿಲ ಸೋರಿಕೆ ಕಾರ್ಯಾಚರಣೆ ದಳದ ಸಿಬ್ಬಂದಿ ಒಂದೂವರೆ ಗಂಟೆ ಶ್ರಮಪಟ್ಟು ಸೋರಿಕೆ ತಡೆಗಟ್ಟಿದರು.

 

ಪ್ರತಿಕ್ರಿಯಿಸಿ (+)