ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೀತಾ ಜಯಂತಿ: ಗ್ರಂಥಗಳ ಲೋಕಾರ್ಪಣೆ

ಮಂಗಳೂರು ಸಂಸ್ಕೃತ ಸಂಘದಿಂದ ಕಾರ್ಯಕ್ರಮ ಆಯೋಜನೆ
Last Updated 6 ಡಿಸೆಂಬರ್ 2022, 11:18 IST
ಅಕ್ಷರ ಗಾತ್ರ

ಮಂಗಳೂರು: ಭಗವದ್ಗೀತೆ ಭಾರತೀಯರ ಪರಮೋಚ್ಛ ಗ್ರಂಥ. ಇದರ ಸಾರ ಉಣಬಡಿಸುವ ಕಾರ್ಯ ನಮ್ಮ ದೇಶದಲ್ಲಿ ನಿರಂತರ ನಡೆಯಬೇಕಿದೆ ಎಂದು ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕರಾದ ಕಟೀಲು ವಾಸುದೇವ ಆಸ್ರಣ್ಣ ಹೇಳಿದರು.

ಮಂಗಳೂರು ಸಂಸ್ಕೃತ ಸಂಘದ ಆಶ್ರಯದಲ್ಲಿ ಮತ್ತು ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಸಹಯೋಗದೊಂದಿಗೆ ಶ್ರೀ ಶಾರದಾ ವಿದ್ಯಾಲಯದ ಧ್ಯಾನಮಂದಿರದಲ್ಲಿ ನಡೆದ ಗೀತಾ ಜಯಂತಿ ಮತ್ತು ಡಾ.ಜಿ.ಎನ್‌. ಭಟ್ಟ ಅವರ ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಂಥಗಳನ್ನು ಬಿಡುಗಡೆ ಮಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಯಡಪಡಿತ್ತಾಯ, ಪ್ರಸ್ತುತ ಕಾಲಘಟ್ಟದಲ್ಲಿ ಗೀತೆಯಂತಹ ಗ್ರಂಥಗಳನ್ನು ವಿಮರ್ಶಾತ್ಮಕವಾಗಿ ಚಿಂತನೆಗೆ ಒಳಪಡಿಸಿದಾಗ ನಿಜವಾದ ಸಾರ ಅರ್ಥೈಸಿಕೊಳ್ಳಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿದ್ದ ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಡಾ.ಭಟ್ಟರ ‘ಪ್ರಧಾನ ಉಪನಿಷತ್ತುಗಳ ತತ್ವವಿವೇಚನೆ’ ಗ್ರಂಥದ ಕುರಿತು ಮಾತನಾಡಿದರು. ವ್ಯಕ್ತಿತ್ವ ವಿಕಸನಕ್ಕೆ ಭಗವದ್ಗೀತಾ ಕೈಪಿಡಿ ಎನ್ನುವ ಕೃತಿಯನ್ನು ಸಂಸ್ಕೃತ ಪ್ರಾಧ್ಯಾಪಕ ಡಾ.ಶಿಕಾರಿಪುರ ಕೃಷ್ಣಮೂರ್ತಿ ಪರಿಚಯಸಿದರು. ಪ್ರಾಧ್ಯಾಪಕ ಡಾ.ಹಯವದನ ಉಪಾಧ್ಯಾಯ ಅವರು ಗೀತಾ ತತ್ವದರ್ಶನ ಮತ್ತು ಆಧುನಿಕ ಆನ್ವಯಿಕತೆ ಕೃತಿಯನ್ನು ಪರಿಚಯಿಸಿ ಮಾತನಾಡಿದರು. ಸಂಸ್ಕೃತ ಉಪನ್ಯಾಸಕಿ ಡಾ.ಸುರೇಖಾ ಅವರು ಭಾರತೀಯ ವೇದ ವಿದ್ಯಾಪರಂಪರೆ ಎನ್ನುವ ಕೃತಿಯನ್ನು ಪರಿಚಯಿಸಿದರು.

ಗ್ರಂಥಕರ್ತರಾದ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಡಾ. ಜಿ.ಎನ್.ಭಟ್ಟ, ಅಧ್ಯಕ್ಷತೆ ವಹಿಸಿದ್ದ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ ಮಾತನಾಡಿದರು.

ಕುಲಪತಿ ಪ್ರೊ. ಬಿ.ಎಸ್.ಯಡಪಡಿತ್ತಾಯ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಎಂ. ಪ್ರಭಾಕರ ಜೋಶಿ ಅವರನ್ನು ಸಂಸ್ಕೃತ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಮಂಗಳೂರು ಸಂಸ್ಕೃತ ಸಂಘದ ಅಧ್ಯಕ್ಷ, ಶಾರದಾ ಪ.ಪೂ.ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ರಮೇಶ ಆಚಾರ್ಯ ನಾರಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾರದಾ ವಿದ್ಯಾಲಯ ಆಡಳಿತಾತ್ಮಕ ಪ್ರಾಂಶುಪಾಲ ದಯಾನಂದ ಕಟೀಲು ವಂದಿಸಿದರು. ತಾಲ್ಲೂಕು ಮಟ್ಟದಲ್ಲಿ ನಡೆದ ಭಗವದ್ಗೀತಾ ಕಂಠಪಾಠ, ಭಾಷಣ, ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು. ಡಾ.ಮಧುಕೇಶ್ವರ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ಶಾರದಾ ಪ.ಪೂ. ವಿದ್ಯಾಲಯದ ವಿದ್ಯಾರ್ಥಿನಿಯರಾದ ಶ್ರಾವ್ಯ ಬಿ.ಎಸ್. ಮತ್ತು ಸಾಕ್ಷಿ ಮತ್ತು ಬಳಗದವರು ಗೀತೋಪದೇಶ ಎನ್ನುವ ನೃತ್ಯ ರೂಪಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT