ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಸ್ ಟೀನ್‌: ಯಶಸ್ವಿನಿ ಮೊದಲ ರನ್ನರ್ ಅಪ್

Published 27 ಮೇ 2023, 12:39 IST
Last Updated 27 ಮೇ 2023, 12:39 IST
ಅಕ್ಷರ ಗಾತ್ರ

ಮಂಗಳೂರು: ನಗರದ ಯಶಸ್ವಿನಿ ದೇವಾಡಿಗ ಅವರು ಮಿಸ್ ಟೀನ್ ಇಂಡಿಯಾ ಸೂಪರ್ ಗ್ಲೋಬ್ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ, ಥಾಯ್ಲೆಂಡ್‌ನಲ್ಲಿ ನಡೆಯಲಿರುವ ಜಾಗತಿಕ ಫೈನಲ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದುಕೊಂಡಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಯಶಸ್ವಿನಿ, ಹೈದರಾಬಾದ್‌ನ ಕೊಂದಪುರದಲ್ಲಿ ಈಚೆಗೆ ಸ್ಪರ್ಧೆ ನಡೆದಿದ್ದು ಎರಡು ದಿನಗಳಲ್ಲಿ ಪರಿಚಯ, ಪ್ರತಿಭಾ ಪ್ರದರ್ಶನ, ಸಂದರ್ಶನ, ರಾಷ್ಟ್ರೀಯ ಪೋಷಾಕು, ಗೌನ್‌, ಪ್ರಶ್ನೋತ್ತರ ಎಂಬ ಸುತ್ತುಗಳು ಇದ್ದವು. 50 ಸ್ಪರ್ಧಿಗಳು ಇದ್ದರು. ಫೇಸ್ ಆಫ್ ಕರ್ನಾಟಕ, ಮಿಸ್ ಟೀನ್ ಮಂಗಳೂರು ಮುಂತಾದ ಬಿರುದುಗಳು ಕೂಡ ತಮಗೆ ಸಿಕ್ಕಿವೆ ಎಂದು ತಿಳಿಸಿದರು.

ದೇವದಾಸ್ ಕುಳಾಯಿ ಮತ್ತು ಮೀನಾಕ್ಷಿ ಕುಳಾಯಿ ಅವರ ಪುತ್ರಿ ಯಶಸ್ವಿನಿ ಸುರತ್ಕಲ್‌ನ ಗೋವಿಂದದಾಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ನೃತ್ಯ, ಏಕಪಾತ್ರಾಭಿನಯ ಮುಂತಾದ ಕಲೆಗಳಲ್ಲಿ ಆಸಕ್ತಿ ಇರುವ ಅವರು ಸಣ್ಣ ವಯಸ್ಸಿನಲ್ಲೇ ಪ್ಯಾಷನ್ ಜಗತ್ತಿನತ್ತ ಆಕರ್ಷಿತರಾಗಿದ್ದಾರೆ. ನವೀನ್ ಬಿಲ್ಲವ ಅವರು ತರಬೇತಿ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮೀನಾಕ್ಷಿ ಕುಳಾಯಿ ಮತ್ತು ನಿಶ್ಮಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT