ರಸ್ತೆ ಬದಿಯಲ್ಲಿ ಸಿಕ್ಕಿದ ಚಿನ್ನ, ನಗದು:ವಾರಸುದಾರರಿಗೆ ನೀಡಿದ ಚಾಲಕ

7

ರಸ್ತೆ ಬದಿಯಲ್ಲಿ ಸಿಕ್ಕಿದ ಚಿನ್ನ, ನಗದು:ವಾರಸುದಾರರಿಗೆ ನೀಡಿದ ಚಾಲಕ

Published:
Updated:
 ಪೊಡಿಮೋನ್ ( ಹಮೀದ್)

ಬೆಳ್ತಂಗಡಿ : ರಸ್ತೆ ಬದಿಯಲ್ಲಿ ಸಿಕ್ಕಿದ ಚಿನ್ನ, ನಗದು ಮತ್ತು ಮೊಬೈಲ್ ಫೋನ ಅನ್ನು ವಾರಸುದಾರರಿಗೆ ನೀಡಿ ಗುರುವಾಯನಕೆರೆಯ ಆಟೊ ರಿಕ್ಷಾ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಇಲ್ಲಿಯ ಪಿಲಿಚಂಡಿಕಲ್ಲು  ನಿವಾಸಿ ಪೊಡಿಮೋನ್ ಯಾನೆ ಹಮೀದ್ ಗುರುವಾಯನಕೆರೆಯಲ್ಲಿ ರಿಕ್ಷಾ ಚಾಲಕರಾಗಿದ್ದು, ಇವರು ಅಲ್ಲಿಯೇ ಸಮೀಪದ ಪರಪ್ಪು ಪ್ರದೇಶಕ್ಕೆ ಬಾಡಿಗೆಗೆ ತೆರಳಿದ್ದಾಗ ಈ ಪ್ರಸಂಗ ನಡೆದಿದೆ. ‘ ರಸ್ತೆ ಬದಿಯಲ್ಲಿ ಅಂದಾಜು 2 ಲಕ್ಷದ ಚಿನ್ನ, ನಗದು ಹಾಗೂ ಒಂದು ಮೊಬೈಲ್ ಪೋನ್ ಸಿಕ್ಕಿದೆ. ಸ್ವಿಚ್ ಆಫ್ ಆಗಿದ್ದ ಮೊಬೈಲ್ ಫೋನನ್ನು ಸ್ವಿಚ್ ಆನ್ ಮಾಡಿ ಮಾಲೀಕರಿಗೆ ಕರೆ ಮಾಡಿ ಅವರಿಗೆ ಚಿನ್ನ, ನಗದು ಮತ್ತು ಫೋನನ್ನು ವಾಪಸ್‌ ನೀಡಿದ್ದಾರೆ’ ಎಂದು ಸ್ಥಲೀಯರು ತಿಳಿಸಿದ್ದಾರೆ.

ಪುತ್ತೂರಿನ ಬಲ್ನಾಡ್ ಗ್ರಾಮದ ಪ್ರೇಮ ಚಿನ್ನ , ನಗದು, ಫೋನ್‌ ಇವುಗಳ ವಾರಸುದಾರರಾಗಿದ್ದು, ಚಾಲಕ ಪೊಡಿಮೋನ್  ಅವರ ಪ್ರಾಮಾಣಿಕತೆಗೆ ಮೆಚ್ಚುಗೆ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !