ಶುಕ್ರವಾರ, ಡಿಸೆಂಬರ್ 3, 2021
23 °C

ಸುವರ್ಣ ಮಹೋತ್ಸವ ಸಮಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮಂಗಳೂರು ಮೆಡಿಕಲ್ ರಿಲೀಫ್ ಸೊಸೈಟಿ ಮತ್ತು ಐಎಂಎ ಮಂಗಳೂರು ಘಟಕದ ಆಶ್ರಯದಲ್ಲಿ ಮಂಗಳೂರು ಮೆಡಿಕಲ್ ರಿಲೀಫ್ ಸೊಸೈಟಿಯ ಸುವರ್ಣ ಮಹೋತ್ಸವ ಸಮಾರಂಭವು ನ.27ರಂದು ಸಂಜೆ 7.30ಕ್ಕೆ ನಗರದ ಅತ್ತಾವರದಲ್ಲಿರುವ ಐಎಂಎ ಕಟ್ಟಡದ ಡಾ. ಎ.ವಿ. ರಾವ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸೊಸೈಟಿಯ ಕಾರ್ಯದರ್ಶಿ ಡಾ.ಪ್ರಿಯಾ ಬಲ್ಲಾಳ್ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು. ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ವಿನಯ್ ಹೆಗ್ಡೆ, ಯೆನೆಪೋಯ ವಿಶ್ವವಿದ್ಯಾಲಯದ ಕುಲಾಧಿಪತಿ ವೈ., ಅಬ್ದುಲ್ ಕುಂಞ ಭಾಗವಹಿಸುವರು ಎಂದರು.

1971ರ ಡಿ.26ರಂದು ಆಗಿನ ರಾಷ್ಟ್ರಪತಿ ವಿ.ವಿ. ಗಿರಿ ಅವರು ಮಂಗಳೂರು ಮೆಡಿಕಲ್ ರಿಲೀಫ್ ಸೊಸೈಟಿಯನ್ನು ಉದ್ಘಾಟಿಸಿದ್ದರು. ಡಾ.ಕೆ.ಆರ್. ಶೆಟ್ಟಿ ಮತ್ತು ಇತರ ವೈದ್ಯರ ವಿನಂತಿಯ ಮೇರೆಗೆ ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷರಾದರು. ಪಿ.ಎನ್. ಅರಿಗ ಉಪಾಧ್ಯಕ್ಷರಾಗಿ, ಡಾ.ಕೆ. ಆರ್. ಶೆಟ್ಟಿ ಸಂಸ್ಥಾಪಕ ಕಾರ್ಯದರ್ಶಿಯಾಗಿ, ಡಾ. ಸಿ.ಆರ್. ಕಾಮತ್ ಖಜಾಂಚಿಯಾಗಿ ನೇಮಕಗೊಂಡರು. ಅನೇಕ ವೈದ್ಯರು ಮುನ್ನಡೆಗೆ ನೆರವಾದರು. ಮಂಗಳೂರು ಮಡಿಕಲ್ ರಿಲೀಫ್ ಸೊಸೈಟಿಯು ಆರಂಭದಿಂದಲೂ ಜನರಿಗೆ ಆಧುನಿಕ ವೈದ್ಯಕೀಯ ಸೌಲಭ್ಯ ಕಲ್ಪಿಸುತ್ತಿದೆ ಎಂದರು. ಸೊಸೈಟಿಯ ಖಜಾಂಚಿ ಡಾ.ಅಜಯ್ ಕಾಮತ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು