ಮಂಗಳೂರು: ಗೌಡ ಸಾರಸ್ವತ ಸಮುದಾಯವನ್ನು ಒಗ್ಗೂಡಿಸುವ ಉದ್ದೇಶದಿಂದ 2017ರಲ್ಲಿ ಪ್ರಾರಂಭಿಸಿರುವ ಜಿಪಿಎಲ್ ಉತ್ಸವಕ್ಕೆ ಈಗ ದಶಕದ ಸಂಭ್ರಮ. ಈ ವರ್ಷದ ಉತ್ಸವವನ್ನು ಏ.10ರಿಂದ 12ರವರೆಗೆ ಮೂಲ್ಕಿ– ಹೆಜಮಾಡಿಯಲ್ಲಿರುವ ಶ್ಯಾನುಭೋಗ್ ಕುದ್ರುವಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದರು.

ಉತ್ಸವದ ಕುರಿತು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಿರಣ್ ಶೆಣೈ, ‘ಕ್ರಿಕೆಟ್, ಫುಡ್ಕೋರ್ಟ್, ಬೋಟಿಂಗ್, ಕಿಡ್ಸ್ ಝೋನ್, ಶಾಂಭವಿ ಆರತಿ, ಸಾಂಸ್ಕೃತಿಕ ಕಾರ್ಯಕ್ರಮ, ಪಂಚಾಯಿತಿ ಕಟ್ಟೆ, ಪೆಟ್ ಶೋ, ಜಿಪಿಎಲ್ ಕ್ರೀಡಾ ಕಾರ್ನಿವಲ್, ಒಂಟೆ ಮತ್ತು ಕುದುರೆ ಸವಾರಿ, ಪ್ಲೀ ಮಾರುಕಟ್ಟೆ ಈ ಬಾರಿಯ ಉತ್ಸವದ ವಿಶೇಷ’ ಎಂದರು.

ಕರ್ನಾಟಕ, ಕೇರಳ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಜಿಎಸ್ಬಿ ಸಮುದಾಯದ ಕ್ರಿಕೆಟ್ ತಂಡಗಳು ಹೊನಲು ಬೆಳಕಿನ ಪಂದ್ಯದಲ್ಲಿ ಸೆಣಸಾಡಲಿವೆ. ಸರಣಿ ಶ್ರೇಷ್ಠ ಕ್ರೀಡಾಪಟುವಿಗೆ ಹೊಸ ಬೈಕ್ ನೀಡಲಾಗುವುದು. ಫುಡ್ಕೋರ್ಟ್ನಲ್ಲಿ ದಕ್ಷಿಣ ಭಾರತ, ಉತ್ತರ ಭಾರತದ ಸಸ್ಯಾಹಾರಿ ತಿನಿಸುಗಳು ಇರಲಿವೆ. ಮಕ್ಕಳಿಗಾಗಿ ಆಟಿಕೆಗಳು, ಶಾಂಭವಿ ನದಿಯಲ್ಲಿ ಬೋಟಿಂಗ್ ವ್ಯವಸ್ಥೆಗೊಳಿಸಲಾಗಿದ್ದು, ಸ್ಪೀಡ್ ಬೋಟ್, ಫ್ಯಾಮಿಲಿ ಬೋಟ್, ಜೆಟ್ ಕಿಂಗ್, ಕಯಾಕಿ ಸೌಲಭ್ಯಗಳು ಇವೆ. ಏ.11ರಂದು ಸಂಜೆ 7.30ಕ್ಕೆ ಗಂಗಾರತಿ ಮಾದರಿಯಲ್ಲಿ ಶಾಂಭವಿ ನದಿಗೆ ಶಾಂಭವಿ ಆರತಿ ನಡೆಸಲಾಗುವುದು ಎಂದು ಹೇಳಿದರು.

ಪಂಚಾಯಿತಿ ಕಟ್ಟೆಯಲ್ಲಿ ಕಥಾ ವಾಚನ, ಕವಿಗೋಷ್ಠಿ, ಹರಟೆ, ಕ್ರೀಡಾ ಕಾರ್ನಿವಲ್ನಲ್ಲಿ ಲಘು ಮೋಜಿನ ಆಟಗಳು, ಸಾಕುಪ್ರಾಣಿಗಳ ಪ್ರದರ್ಶನ, ಗೃಹ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಇವೆಲ್ಲವುಗಳನ್ನು ಒಂದೇ ಸ್ಥಳದಲ್ಲಿ ವೀಕ್ಷಿಸಬಹುದು ಎಂದು ನಾಗೇಂದ್ರ ಶೆಣೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗೋಪಾಲಕೃಷ್ಣ ಭಟ್, ರಜತ್ ಭಂಡಾರ್ಕಾರ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-28-1358942808

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.