ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು: ಗ್ರಾ.ಪಂ ಉಪಚುನಾವಣೆಗೆ ‘ಪುತ್ತಿಲ ಪರಿವಾರ’ ಪ್ರವೇಶ

Published 10 ಜುಲೈ 2023, 15:25 IST
Last Updated 10 ಜುಲೈ 2023, 15:25 IST
ಅಕ್ಷರ ಗಾತ್ರ

ಪುತ್ತೂರು: ತಾಲ್ಲೂಕಿನ ಆರ್ಯಾಪು ಗ್ರಾಮ ಪಂಚಾಯಿತಿ ಮತ್ತು ನಿಡ್ಪಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ತಲಾ ಒಂದು ಸ್ಥಾನಗಳಿಗೆ ಜುಲೈ 26ರಂದು ಉಪಚುನಾವಣೆ ನಡೆಯಲಿದ್ದು, ಈ ಎರಡೂ ಕ್ಷೇತ್ರಗಳಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಲು ಮುಂದಾಗಿದ್ದಾರೆ.
ನಿಡ್ಪಳ್ಳಿಯಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

ನಿಡ್ಪಳ್ಳಿ ಗ್ರಾಮ ಪಂಚಾಯಿತಿಯ ಒಂದನೇ ವಾರ್ಡ್‌ ಸದಸ್ಯ ಮುರಳೀಕೃಷ್ಣ ಭಟ್ ಕೆಲವು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಆ ಸ್ಥಾನದ ಉಪಚುನಾವಣೆಗೆ ಸಂಬಂಧಿಸಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಜಗನ್ನಾಥ್ ರೈ ಕೊಳಂಬೆತ್ತಿಮಾರ್ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

ಅರುಣ್‌ಕುಮಾರ್‌ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನಕುಮಾರ್ ಮಾರ್ತ, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ವೀರಮಂಗಲ, ಪುತ್ತೂರು ನಗರ ಘಟಕದ ಅಧ್ಯಕ್ಷ ಅನಿಲ್ ತೆಂಕಿಲ, ಪುತ್ತಿಲ ಪರಿವಾರದ ನಿಡ್ಪಳ್ಳಿ ಗ್ರಾ.ಪಂ.ಉಪಪಚುನಾವಣಾ ಪ್ರಭಾರಿ ಚಂದ್ರಹಾಸ ಈಶ್ವರಮಂಗಲ, ಪರಿವಾರದ ಪ್ರಮುಖರಾದ ಸುಧೀರ್ ರೈ ನೇಸರಕಂಪ, ದೇವಸ್ಯ ಶ್ರೀನಿವಾಸ ಭಟ್, ಕುಮಾರ ನರಸಿಂಹ ಭಟ್,ನಾರಾಯಣ  ಪಾಟಾಳಿ, ಸುರೇಶ್, ಸತೀಶ್ ಕೆ. ಮೊದಲಾದವರು ನಾಮಪತ್ರ ಸಲ್ಲಿಕೆ ವೇಳೆ ಇದ್ದರು.

ಆರ್ಯಾಪು ಗ್ರಾಮ ಪಂಚಾಯಿತಿಯ ಆರ್ಯಾಪು ಎರಡನೇ ವಾರ್ಡ್‌ನ (ಆರ್ಯಾಪು 11) ಸದಸ್ಯರಾಗಿದ್ದ ನಿವೃತ್ತ ಎಸ್ಐ ರುಕ್ಮಯ್ಯ ಮೂಲ್ಯ ಅವರು ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದು, ಅವರ ಸ್ಥಾನಕ್ಕೆ ಪುತ್ತಿಲ ಪರಿವಾರದವರು ಮಂಗಳವಾರ ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT