ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ವಿಮಾನ ನಿಲ್ದಾಣಕ್ಕೆ ಹಸಿರು ಸ್ವಾಗತ

Last Updated 5 ಏಪ್ರಿಲ್ 2022, 3:24 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣವು ಹಸಿರಿನಿಂದ ಕಂಗೊಳಿಸುವಂತೆ ಕಾಣಲು ಸಿದ್ಧತೆಗಳು ನಡೆಯುತ್ತಿವೆ.

ವಿಮಾನ ನಿಲ್ದಾಣ ಆಡಳಿತವು ತೋಟಗಾರಿಕಾ ತಜ್ಞರ ಮಾರ್ಗದರ್ಶನದಲ್ಲಿ 10 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡಲು ಯೋಜನೆ ರೂಪಿಸಿದೆ. ಆಲಂಕಾರಿಕ ಸಸ್ಯಗಳಿರುವ 600ಕ್ಕೂ ಹೆಚ್ಚು ಕುಂಡಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ಕನಿಷ್ಠ ಆರೈಕೆಯ, ವೇಗವಾಗಿ ಬೆಳೆಯಬಹುದಾದ, ಕಡಿಮೆ ನೀರು ಬಯಸುವ, ಸುಂದರವಾಗಿ ಕಾಣುವ ಗಿಡಗಳನ್ನು ಬೆಳೆಸಲು ಆದ್ಯತೆ ನೀಡಲಾಗಿದೆ.

ಎರಡು ಅಡಿ ಎತ್ತರಕ್ಕೆ ಬೆಳೆಯುವ ಆಲ್ಪಿನಿಯಾ ಪರ್ಪುರಾಟ ಗಿಡಗಳು ಈಗಾಗಲೇ ವಿಮಾನ ನಿಲ್ದಾಣದ ಸೌಂದರ್ಯವನ್ನು ಹೆಚ್ಚಿಸಿವೆ. ವಿವಿಧ ಸ್ಥಳೀಯ ಜಾತಿಯ ತಾಳೆಗಳ ಚಿಕ್ಕ ಕಾಯಿಗಳು ಪ್ರವಾಸಿಗರನ್ನು ಸ್ವಾಗತಿಸುತ್ತವೆ. ಅಶೋಕ, ಕ್ಯಾಸಿಯಾ ಮರ, ಬಿದಿರು, ಲಿಲ್ಲಿ, ದಾಸವಾಳದಂತಹ ಪೊದೆಗಳನ್ನು ಕಾಣಬಹುದಾಗಿದೆ.52 ಪ್ರಭೇದದ ಸಸ್ಯಗಳನ್ನು ಬೆಳೆಸಲು ಯೋಚಿಸಲಾಗಿದೆ. ಒಳಾಂಗಣದಲ್ಲಿ ಕುಂಡದಲ್ಲಿ ಮತ್ತು ಹೊರಾಂಗಣದಲ್ಲಿ ಮಣ್ಣಿನಲ್ಲಿ ಗಿಡಗಳನ್ನು ನೆಡಲಾಗುತ್ತದೆ. ಗಿಡಗಳಿಗೆ ನೀರುಣಿಸಲು ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಲಾಗುವುದು ಎಂದು ವಿಮಾನ ನಿಲ್ದಾಣ ಪ್ರಮುಖರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT