ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ವಿಶ್ವವಿದ್ಯಾಲಯದ ಅಥ್ಲೆಟಿಕ್ಸ್‌ ಇಂದಿನಿಂದ

Last Updated 22 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಧಾರವಾಡ: ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ ಶುಕ್ರವಾರದಿಂದ (ಫೆ. 23) ಎರಡು ದಿನ ಇಲ್ಲಿನ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆಯಲಿದೆ.

‘ಹುಬ್ಬಳ್ಳಿ, ಬೆಂಗಳೂರು, ಕಲಬುರ್ಗಿ ಮತ್ತು ಮಂಗಳೂರು ವಲಯದಿಂದ ಒಟ್ಟು 56 ಕಾಲೇಜುಗಳ 507 ಅಥ್ಲೀಟ್‌ಗಳು ಭಾಗವಹಿಸಲಿದ್ದಾರೆ. ಬೆಂಗಳೂರು ವಲಯದಿಂದ ಹೆಚ್ಚು (238) ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಕಾನೂನು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಖಾಲಿದ್ ಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹುಬ್ಬಳ್ಳಿಯ ಜಿ.ಕೆ. ಕಾನೂನು ಕಾಲೇಜಿನ ವೀಣಾ ಎಚ್‌. ಅಡಗಿಮನಿ, ಲಕ್ಷ್ಮಣ್‌ ಲಮಾಣಿ, ಗದಗನ ಎಸ್‌.ಎ. ಮಾನ್ವಿ ಕಾನೂನು ಕಾಲೇಜಿನ ಭಕ್ಷೀಸ್‌ ಸಾಲಿಯಾ ಮತ್ತು ಶಂಕರಸಿಂಗ್‌ ಡಿಸ್ಕ್ ಅವರು ಈ ಬಾರಿಯ ಕೂಟದಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ವೀಣಾ 2011ರಲ್ಲಿ ರಾಂಚಿಯಲ್ಲಿ ನಡೆದಿದ್ದ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌ನ 100 ಮೀಟರ್‌ ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಇವರು ಇಲ್ಲಿ 100 ಮತ್ತು 200 ಮೀಟರ್ಸ್ ಓಟದ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಲಕ್ಷ್ಮಣ್‌ ಲಮಾಣಿ 800 ಮತ್ತು 1500 ಮೀಟರ್ಸ್ ವಿಭಾಗದಲ್ಲಿ, ಭಕ್ಷೀಸ್ 200 ಮತ್ತು 400 ಮೀಟರ್ಸ್ ವಿಭಾಗದಲ್ಲಿ, ಶಂಕರ್‌ಸಿಂಗ್‌ 100 ಹಾಗೂ 200 ಮೀಟರ್ಸ್ ಓಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಾಲ್ವರೂ ಅಥ್ಲೀಟ್‌ಗಳು ಕಳೆದ ಬಾರಿ ಅಂತರ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT