ಮಂಗಳೂರು: ಕೊಲ್ಲಿ ಯುದ್ದದಿಂದಾಗಿ ಕರಾವಳಿಯ ಪ್ರವಾಸೋದ್ಯಮ ಚಟುವಟಿಕೆ ಮೇಲೂ ಪರಿಣಾಮ ಉಂಟಾಗಿದೆ. ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ–ಕೊಲ್ಲಿ ರಾಷ್ಟ್ರಗಳ ನಡುವಿನ ವಿಮಾನ ಯಾನ ಸೇವೆಯಲ್ಲಿ ಏರುಪೇರಾಗಿರುವುದರಿಂ ಹಾಗೂ ಅರಬ್ನ ಕೆಲ ರಾಷ್ಟ್ರಗಳಿಗೆ ವಿಮಾನ ಸಂಪರ್ಕ ಕಡಿತಗೊಂಡಿರುವುದರಿಂದ ಕರಾವಳಿಗೆ ಭೇಟಿ ನೀಡುವ ಹಾಗೂ ಇಲ್ಲಿಂದ ಕೊಲ್ಲಿ ರಾಷ್ಟ್ರಗಳಿಗೆ ತೆರಳುವ ಪ್ರವಾಸಿಗರ ಸಂಖ್ಯೆ ಮಾರ್ಚ್ ತಿಂಗಳಲ್ಲಿ ಗಣನೀಯವಾಗಿ ಇಳಿಕೆಯಾಗಿದೆ.

ಇಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಮಾರ್ಚ್ನಿಂದ ಮೇ ತಿಂಗಳವರೆಗೆ ವಿದೇಶ ಪ್ರವಾಸ ಕೈಗೊಳ್ಳುವವರ ಸಂಖ್ಯೆ ಜಾಸ್ತಿ. ಈ ವರ್ಷ ಇಲ್ಲಿಂದ ಅರಬ್ ಹಾಗೂ ಯೂರೋಪ್ ದೇಶಗಳಿಗೆ ಪ್ರವಾಸಕ್ಕೆ ತೆರಳಲು ಕಾಯ್ದಿರಿಸಿದ್ದ ಟಿಕೆಟ್ಗಳನ್ನು ಅನೇಕರು ರದ್ದುಪಡಿಸಿದ್ದಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ಮುಸ್ಲಿಮರು ರಂಜಾನ್ ತಿಂಗಳಲ್ಲಿ ಊರಿಗೆ ಮರಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಹಾಗಾಗಿ ವಿದೇಶಕ್ಕೆ ತೆರಳುವ ಹಾಗೂ ಅರಬ್ ದೇಶಗಳಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ಪ್ರವಾಸೋದ್ಯಮ ಸಂಸ್ಥೆಗಳ ಮೂಲಗಳು ತಿಳಿಸಿವೆ.

‘ನಮ್ಮ ಸಂಸ್ಥೆಯ ಪ್ರವಾಸ ಪ್ಯಾಕೇಜ್ನ ತಂಡದಲ್ಲಿ 30ರಿಂದ 40 ಪ್ರವಾಸಿಗರು ಇರುತ್ತಾರೆ. ಮಾರ್ಚ್ ತಿಂಗಳಲ್ಲಿ ರಜಾ ಕಾಲದ ಪ್ರವಾಸ ಪ್ಯಾಕೇಜ್ ಕಾಯ್ದಿರಿಸಿದವರಲ್ಲಿ ಬಹುತೇಕರು ರದ್ದುಪಡಿಸಿದ್ದಾರೆ. ಏಪ್ರಿಲ್ ತಿಂಗಳ ರಜಾ ಕಾಲದ ಪ್ರವಾಸವನ್ನು ತಡೆಹಿಡಿಯುವಂತೆ ಕೋರಿದ್ದಾರೆ’ ಎಂದು ನಿರ್ಮಲಾ ಟ್ರಾವೆಲ್ಸ್ನ ವಾಟಿಕಾ ಪೈ ತಿಳಿಸಿದರು.

ದುಬೈ ಪ್ರವಾಸವನ್ನು ಮೇ ಅಂತ್ಯದವರೆಗೆ ರದ್ದುಪಡಿಸಲಾಗಿದೆ ಎಂದು ವಿಕ್ರಂ ಟ್ರಾವೆಲ್ಸ್ನ ಪ್ರಾದೇಶಿಕ ಉಸ್ತುವಾರಿ ಸುಬ್ರಹ್ಮಣ್ಯ ಎಚ್.ಪಿ. ತಿಳಿಸಿದರು. ‘ದುಬೈ ಪ್ರವಾಸ ಋತು ಸೆಪ್ಟೆಂಬರ್ನಿಂದ ಮೇ ಅಂತ್ಯದವರೆಗೆ ಇರುತ್ತದೆ. ಈಗಿನ ಸ್ಥಿತಿಯಲ್ಲಿ ಅಲ್ಲಿಗೆ ಪ್ರವಾಸಿಗರನ್ನು ಕರೆದೊಯ್ಯುವುದನ್ನು ಸ್ಥಗಿತಗೊಳಿಸಿದ್ದೇವೆ. ಈಗಾಗಲೇ ಪ್ರವಾಸದ ಪ್ಯಾಕೇಜ್ ಕಾಯ್ದಿರಿಸಿದವರೂ ಅಲ್ಲಿಗೆ ತೆರಳಲು ಬಯಸುತ್ತಿಲ್ಲ. ಏಪ್ರಿಲ್ನಲ್ಲಿ ಪರಿಸ್ಥಿತಿ ತಿಳಿಯಾದರೂ ಅಲ್ಲಿಗೆ ತೆರಳಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಅವರು ತಿಳಿಸಿದರು.

‘ಉಮ್ರಾ ಯಾತ್ರೆಗೆ ಹಾಗೂ ಪ್ರವಾಸಿ ವೀಸಾದಡಿ ಅರಬ್ ರಾಷ್ಟ್ರಗಳಿಗೆ ಬಂದಿರುವ ಅನೇಕರು ಊರಿಗೆ ಮರಳಲಾಗದೇ ಇಲ್ಲೇ ಸಿಕ್ಕಿಬಿದ್ದಿದ್ದಾರೆ’ ಎನ್ನುತ್ತಾರೆ ರಿಯಾದ್ನಲ್ಲಿ ನೆಲೆಸಿರುವ ಪಿ.ಎ.ಹಮೀದ್ ಪಡುಬಿದ್ರಿ.

‘ತಿಂಗಳ ಹಿಂದೆ 400 ಸೌದಿ ರಿಯಾಲ್ನಿಂದ (₹ 9,800) ರಿಂದ 500 (₹ 12,200) ಸೌದಿ ರಿಯಾಲ್ಗೆ ಸಿಗುತ್ತಿದ್ದ ವಿಮಾನಯಾನದ ಟಿಕೆಟ್ ಈಗ 2500 ರಿಯಾಲ್ವರೆಗೆ (₹61ಸಾವಿರ) ತಲುಪಿದೆ. ಇಷ್ಟೊಂದು ಹಣ ತೆತ್ತರೂ ವಿಮಾನಯಾನಕ್ಕೆ ಅವಕಾಶ ಸಿಗುತ್ತದೆ ಎಂಬ ಖಾತರಿ ಇಲ್ಲ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.