ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೆ ತೆರಳಿ ಲಸಿಕೆ ನೀಡಿದ ಸಿಬ್ಬಂದಿ

Last Updated 21 ಸೆಪ್ಟೆಂಬರ್ 2021, 4:41 IST
ಅಕ್ಷರ ಗಾತ್ರ

ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸೋಮವಾರ ಮನೆ–ಮನೆಗೆ ತೆರಳಿ ಕೋವಿಡ್ ತಡೆ ಲಸಿಕೆ ನೀಡಿದ್ದಾರೆ.

ಆರೋಗ್ಯ ಕೇಂದ್ರ ವ್ಯಾಪ್ತಿಯ 12 ಗ್ರಾಮಗಳಲ್ಲಿ ಹಾಸಿಗೆ ಹಿಡಿದಿರುವವರು, ಎಂಡೋ ಸಲ್ಫಾನ್ ಪೀಡಿತರು, ಲಸಿಕಾ ಕೇಂದ್ರಕ್ಕೆ ಬರಲು ಆಗದ ಅಶಕ್ತ ಫಲಾನುಭವಿಗಳು ಸೇರಿ ಒಟ್ಟು 87 ಜನರಿಗೆ ಲಸಿಕೆ ನೀಡಿದ್ದಾರೆ.

ಕೇಂದ್ರದ ವ್ಯಾಪ್ತಿಯಲ್ಲಿ ಈವರೆಗೆ 18ರಿಂದ 45 ವರ್ಷದ 12,503 ಜನರಿಗೆ ಪ್ರಥಮ ಡೋಸ್, 2,414 ಜನರಿಗೆ ದ್ವಿತೀಯ ಡೋಸ್, 45ರಿಂದ 49 ವರ್ಷದ 6,265 ಜನರಿಗೆ ಪ್ರಥಮ ಡೋಸ್, 2,759 ಜನರಿಗೆ ದ್ವಿತೀಯ ಡೋಸ್, 60 ವರ್ಷ ಮೇಲಿನ
2,848 ಜನರಿಗೆ ಪ್ರಥಮ ಡೋಸ್, 2,469 ಜನರಿಗೆ ದ್ವಿತೀಯ ಡೋಸ್ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗೆ ನೀಡಿರುವ ಮಾಹಿತಿಯಲ್ಲಿ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT