ಬದಿಯಡ್ಕ: ಗುಡ್ಡೆ ಕುಸಿತ

7

ಬದಿಯಡ್ಕ: ಗುಡ್ಡೆ ಕುಸಿತ

Published:
Updated:

ಬದಿಯಡ್ಕ:  ಕಿನ್ನಿಂಗಾರು ಎಂಬಲ್ಲಿನ ರಾಮಣ್ಣ ಪೂಜಾರಿ ಎಂಬವರ ಮನೆಯ ಮೇಲೆ ಶುಕ್ರವಾರ ತಡರಾತ್ರಿ ಗುಡ್ಡ ಜರಿದು ಬಿದ್ದಿದೆ. ₹1 ಲಕ್ಷ ನಷ್ಟ ಅಂದಾಜಿಸಲಾಗಿದೆ.

ಬೆಳ್ಳೂರಿನ ಪಂಬೆಜಾಲು ವಾಸು ಗೌಡ ಎಂಬವರ ಮನೆಯ ಸಮೀಪದ ಗುಡ್ಡ ಮಳೆಯ ಬಿರುಸಿಗೆ ಶುಕ್ರವಾರ ಜರಿದು ಬಿದ್ದಿದೆ. ಗುಡ್ಡ ಜರಿಯುವ ಶಬ್ದ ಕೇಳಿ ಮನೆ ಮಂದಿ ಮನೆಯಿಂದ ಹೊರಗೆ ಓಡಿಹೋದುದರಿಂದ ಭಾರಿ ಅಪಾಯ ತಪ್ಪಿದೆ.

ಕಿನ್ನಿಂಗಾರಿನ ಅಪ್ಪಕುಂಞಿ ಬೆಳ್ಚಪ್ಪಾಡ ಮನೆ ಬಳಿಯ ಆವರಣಗೋಡೆ ಕುಸಿದು ಬಿದ್ದಿದೆ. ಬೆಳ್ಳೂರಿನ ಅಮರಾವತಿ ಎಂಬವರ ಹೆಂಚಿನ ಮನೆಶುಕ್ರವಾರದ ಗಾಳಿ ಮಳೆಗೆ ಕುಸಿದು ಬಿದ್ದಿದೆ. ಹಾನಿ ಸಂಭವಿಸಿದ ಪ್ರದೇಶಗಳಿಗೆ ಕಾರಡ್ಕ ಬ್ಲಾಕ್ ಪಂಚಾಯಿತಿ ಸದಸ್ಯ ಎಂ. ಶ್ರೀಧರ ಭೇಟಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !