ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯಲ್ಲಿ ನಿರಂತರ ಮಳೆ: ಅಪಾಯದ ಮಟ್ಟದಲ್ಲಿ ನದಿಗಳು

Last Updated 6 ಆಗಸ್ಟ್ 2020, 6:49 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿ ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ನೇತ್ರಾವತಿ ನದಿಯು ಅಪಾಯದ ಮಟ್ಟ ತಲುಪುತ್ತಿದೆ.

ಭಾರೀ ಮಳೆಯಾದ ಕಾರಣ ಬಂಟ್ವಾಳಕ್ಕಿಂತ ಮೇಲ್ಭಾಗದಲ್ಲಿರುವ ಶಂಭೂರು ಎಎಂಆರ್‌ ಡ್ಯಾಂನಲ್ಲಿ ನೀರಿನ ಪ್ರಮಾಣ 18.9 ಮೀ. ಹೆಚ್ಚಳವಾಗಿದೆ. ಗುರುವಾರ 8 ಗೇಟ್‌ಗಳನ್ನು ಶೇ 50 ರಷ್ಟು ಹಾಗೂ 1 ಗೇಟನ್ನು ಶೇ 40 ರಷ್ಟು ತೆರೆದು, ನದಿಗೆ‌ ನೀರನ್ನು ಬಿಡಲಾಗುತ್ತಿದೆ.

ಇನ್ನು ತುಂಬೆ ಡ್ಯಾಂನಲ್ಲೂ ನೀರಿನ ಪ್ರಮಾಣ 6.40 ಮೀ. ಗೆ ಏರಿಕೆಯಾಗಿದ್ದು, 30 ಗೇಟ್‌ಗಳನ್ನು ಕೂಡಾ ತೆರೆಯಲಾಗಿದೆ.
ಗುಂಡ್ಯ ನದಿಯಲ್ಲಿ ಅಪಾಯದ ಮಟ್ಟ 5 ಮೀ. ಆಗಿದ್ದು ಪ್ರಸ್ತುತ ನೀರಿನ ಪ್ರಮಾಣ 4.7 ಮೀ. ಗೆ ಏರಿಕೆಯಾಗಿದೆ. ನೇತ್ರಾವತಿ ನದಿ ಬಂಟ್ವಾಳ ಭಾಗದಲ್ಲಿ 7.6 ಮೀ. ನೀರಿನ ಪ್ರಮಾಣವಿದೆ. ನೇತ್ರಾವತಿ ಉಪ್ಪಿನಂಗಡಿ ಭಾಗದಲ್ಲಿ 29.0 ಮೀ. ನೀರಿನ ಪ್ರಮಾಣವಿದ್ದು 31.5 ಮೀ. ಅಪಾಯದ ಮಟ್ಟವಾಗಿದೆ. ಇನ್ನು ಕಡಬದ ದಿಶಾ ಡ್ಯಾಮ್‌ನಲ್ಲಿ ನೀರಿನ ಪ್ರಮಾಣ 4.7 ಮೀಟರ್‌ಗೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಧರ್ಮಸ್ಥಳ ಸ್ನಾನಘಟ್ಟ ಮುಳುಗಡೆಯಾಗುವ ಭೀತಿಯೂ ಕೂಡಾ ಉಂಟಾಗಿದೆ. ಕುಮಾರಧಾರ ನದಿಯಲ್ಲೂ ನೀರಿನ ಮಟ್ಟ ಹೆಚ್ಚಿದ್ದು, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT