ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರ ಬಿರುಸಿನ ಮಳೆಯಾಗಿದ್ದು, ವಿವಿಧೆಡೆ ಹಾನಿಯಾಗಿದೆ. ಮಧೂರು ಮದನಂತೇಶ್ವರ ವಿನಾಯಕ ದೇವಾಲಯ ಸಹಿತ ವಿವಿಧ ಪ್ರದೇಶಗಳು ಜಲಾವೃತವಾಗಿವೆ.

ಜಲಾಶಯಗಳು ಉಕ್ಕಿ ಹರಿಯುತ್ತಿದ್ದು, ಸಮೀಪದ ಪ್ರದೇಶಗಳಲ್ಲಿ ನೆರೆ ಉಂಟಾಗಿದೆ. ಮಧುವಾಹಿನಿ ನದಿ ಉಕ್ಕಿ ಮಧೂರು ದೇವಾಲಯ ಜಲಾವೃತವಾಗಿದೆ. ದೈನಂದಿನ ಚಟುವಟಿಕೆಗಳಿಗೆ ಇಲ್ಲಿ ತೊಡಕುಂಟಾಗಿದ್ದು, ದೇವಾಲಯದಲ್ಲಿ ಸಾರ್ವಜನಿಕರ ಸೇವೆಗಳು ನಡೆಯಲಿಲ್ಲ.

ಕುಂಬಳೆ ಪರ್ವಾಡ್ ಎಂಬಲ್ಲಿ ಝೈನುದ್ದೀನ್ ಎಂಬುವರ ಮನೆಗೆ ಮಳೆ ನೀರು ನುಗ್ಗಿಮನೆಯಉಪಕರಣಗಳು ಹಾನಿಗೀಡಾಗಿವೆ. ಅವರ ಪುತ್ರ ರಿಶಾನ್ ಎಂಬುವರಿಗೆ ವಿದ್ಯುತ್ ಆಘಾತವಾಗಿದೆ. ಇಲ್ಲಿಗೆ ಸಮೀಪದ ಕ್ವಾರ್ಟರ್ಸ್ಗೆಮಳೆನೀರುನುಗ್ಗಿ ಶ್ರೀಲತಾ ಎಂಬುವರಮನೆಗೆಹಾನಿಯಾಗಿದೆ.

ಕುಂಬಳೆ-ಬದಿಯಡ್ಕ ರಸ್ತೆಯ ಶೇಡಿಮೂಲೆ ಎಂಬಲ್ಲಿ ರಸ್ತೆಯಲ್ಲಿನೀರುನಿಂತುವಾಹನಸಂಚಾರಕ್ಕೆಸಮಸ್ಯೆಉಂಟಾಗಿದೆ. ಕುಬಣೂರಿನಲ್ಲಿ ಸುವರ್ಣಗಿರಿ ನದಿ ಉಕ್ಕಿ ಹರಿದು ತೋಟ, ಮನೆಗಳಿಗೆ ಹಾನಿಯಾಗಿದೆ. ಕುಬಣೂರು ರಸ್ತೆಯಲ್ಲಿ ಮಳೆನೀರು ನಿಂತಿತ್ತು. ಲಾಲ್ಭಾಗ್ನಿಂದ ಶಿರಂತಡ್ಕಸಂಪರ್ಕಿಸುವ ರಸ್ತೆಗೆ ಗುಡ್ಡ ಕುಸಿದು ವಿದ್ಯುತ್ ಕಂಬಉರುಳಿದೆ. ಬಂಗ್ರ ಮಂಜೇಶ್ವರ, ಕಣ್ವತೀರ್ಥ ಪ್ರದೇಶಗಳೂ ಜಲಾವೃತವಾಗಿವೆ. ಹೊಸಂಗಡಿ ಪೇಟೆಯಲ್ಲಿ 20 ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಅಟ್ಟೆಗೋಳಿಯಲ್ಲಿ ಗುಡ್ಡ ಕುಸಿದು ಮರವುರುಳಿ ಧನು ಆಚಾರ್ಯ ಎಂಬುವರ ಮನೆ ಮೇಲೆ ಬಿದ್ದಿದೆ. ಹೇರೂರು ಪಾಂಡಿಬಯಲು ಎಂಬಲ್ಲಿ ಗುಡ್ಡ ಕುಸಿದು ಕೆಲವು ಮನೆಗಳಿಗೆ ಹಾನಿಯಾಗಿದೆ.

ಮಂಜೇಶ್ವರ ಮಜಿಬೈಲು ಪಟ್ಟತ್ತೂರು ಎಂಬಲ್ಲಿ ಬಯಿನ ಬಳಿ ನಿಲುಗಡೆ ಮಾಡಿದ್ದ ಕಾರು, ಸ್ಕೂಟರ್, ಬೈಕ್ ನೀರುಪಾಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.