ಮಂಗಳೂರು/ಉಡುಪಿ: ರಾಜ್ಯ ಸರ್ಕಾರ 2022ರಲ್ಲಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿದ ನಂತರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳಲ್ಲಿ ಅಂದಾಜು 145 ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣವನ್ನು ಮೊಟಕುಗೊಳಿಸಿದ್ದರು.

ಈಗ ರಾಜ್ಯ ಸರ್ಕಾರದ ಹೊಸ ಆದೇಶದಿಂದಾಗಿ ಹಿಜಾಬ್ಗೆ ಅವಕಾಶ ದೊರೆತಿದ್ದು, ಈ ವಿದ್ಯಾರ್ಥಿನಿಯರು ಶಿಕ್ಷಣವನ್ನು ಮತ್ತೆ ಮುಂದುವರಿಸುತ್ತಾರೆಯೇ ಎಂಬ ಚರ್ಚೆ ನಡೆದಿದೆ.

‘ಈ ವಿವಾದದ ಸಂದರ್ಭದಲ್ಲಿ ಶಿಕ್ಷಣವನ್ನು ಮೊಟಕುಗೊಳಿಸಿದ್ದ ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ ಅರ್ಧದಷ್ಟು ವಿದ್ಯಾರ್ಥಿನಿಯರು ಮದುವೆಯಾಗಿದ್ದಾರೆ. ಅವರು ಈಗ ಶಿಕ್ಷಣ ಮುಂದುವರಿಸಲು ಸಾಧ್ಯ ವಾಗುವುದೋ ಇಲ್ಲವೋ ತಿಳಿಯದು’ ಎನ್ನುತ್ತಾರೆ ಕಾಲೇಜೊಂದರ ಪ್ರಾಂಶುಪಾಲರು.

‘ಕಾವೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ಓದುತ್ತಿದ್ದ ಜಾಸ್ಮೀನ್, ಹಿಜಾಬ್ಗೆ ನಿರ್ಬಂಧ ಹೇರಿದ ನಂತರ ಶಿಕ್ಷಣ ತೊರೆದಿದ್ದಳು. ಆಕೆಗೆ ವರ್ಷದ ಹಿಂದೆ ವಿವಾಹವಾಗಿದೆ’ ಎಂದು ಜಾಸ್ಮೀನ್ ಅವರ ತಂದೆ ಕೆ.ಮೊಹಮ್ಮದ್ ಉಸ್ಮಾನ್ ತಿಳಿಸಿದರು.

‘ಈ ವಿವಾದದ ಕಾರಣಕ್ಕಾಗಿ ಕಾಲೇಜು ಬಿಟ್ಟಿರುವ ಅಮೀನಮ್ಮ ಕೂಡ ಶಿಕ್ಷಣ ಮುಂದುವರಿಸುವ ಸಾಧ್ಯತೆ ಕಡಿಮೆ. ಆಕೆಗೆ ಇನ್ನು ಕೆಲವು ವಾರಗಳಲ್ಲಿ ಮದುವೆಯಾಗಲಿದೆ’ ಎಂದು ಆಕೆಯ ತಾಯಿ ತಿಳಿಸಿದರು.

‘ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ ಹಿಜಾಬ್ ನಿಷೇಧದ ಕಾರಣಕ್ಕೆ ಶಿಕ್ಷಣವನ್ನು ಮೊಟಕುಗೊಳಿಸಿದ್ದ ಇತರ ಮುಸ್ಲಿಂ ವಿದ್ಯಾರ್ಥಿನಿಯರು, ಹಿಜಾಬ್ ಧರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸದ ಖಾಸಗಿ ಕಾಲೇಜುಗಳಿಗೆ ದಾಖಲಾಗಿದ್ದರು’ ಎಂದು ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಿಯಾಜ್ ಅಹ್ಮದ್ ತಿಳಿಸಿದರು.

‘2022ರ ಹಿಜಾಬ್ ನಿಷೇಧದ ಆದೇಶವನ್ನು ವಿದ್ಯಾರ್ಥಿಗಳಲ್ಲಿ ವಿಭಜನೆ ಸೃಷ್ಟಿಸುವ ಸಾಧನವಾಗಿ ಬಳಸಲಾಯಿತು’ ಎನ್ನುತ್ತಾರೆ ಮಂಗಳೂರಿನ ಪಿ. ದಯಾನಂದ ಪೈ - ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರಾಜಶೇಖರ್ ಹೆಬ್ಬಾರ್. ಆ ಕಾಲೇಜಿನ 35 ವಿದ್ಯಾರ್ಥಿನಿಯರು ಶಿಕ್ಷಣ ಮೊಟಕುಗೊಳಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-51-1244175403

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.