ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡುಬಿದಿರೆ | ಪಾಲಡ್ಕದಲ್ಲಿ ಗುಡ್ಡ ಕುಸಿತ: ರಸ್ತೆ ಬಂದ್ 

Published : 3 ಆಗಸ್ಟ್ 2024, 13:58 IST
Last Updated : 3 ಆಗಸ್ಟ್ 2024, 13:58 IST
ಫಾಲೋ ಮಾಡಿ
Comments

ಮೂಡುಬಿದಿರೆ: ಭಾರಿ ಮಳೆಯಿಂದಾಗಿ ಗುಂಡ್ಯಡ್ಕದಲ್ಲಿ ಶನಿವಾರ ನಸುಕಿನಲ್ಲಿ ಗುಡ್ಡ ಕುಸಿದು ಪಾಲಡ್ಕ-ಕಲ್ಲಮುಂಡ್ಕೂರು ಸಂಪರ್ಕ ರಸ್ತೆ ಬಂದ್ ಆಗಿದೆ.

ಪಾಲಡ್ಕ ಪಂಚಾಯಿತಿ ಉಪಾಧ್ಯಕ್ಷ ಪ್ರವೀಣ್ ಸಿಕ್ಷೇರಾ ಅವರು ಜೆಸಿಬಿ ತರಿಸಿ ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಸಂದರ್ಭ ಮತ್ತೆ ಗುಡ್ಡ ಕುಸಿದಿದೆ. ಗುಡ್ಡದಿಂದ ಮಣ್ಣು ಹಾಗೂ ಬಂಡೆಕಲ್ಲು ಸಮೇತ ಜಾರಿಬಿದ್ದರೂ ಬಂಡೆಕಲ್ಲು ಗುಡ್ಡದ ಅರ್ಧದಲ್ಲಿ ನಿಂತಿತ್ತು. ಆ ಬಳಿಕ ಮಣ್ಣು ಜೆಸಿಬಿ ಮೇಲೆ ಬಿದ್ದು ಜೆಸಿಬಿಯನ್ನು ಒಂದಷ್ಟು ದೂರಕ್ಕೆ ತಳ್ಳಿಕೊಂಡು ಹೋಗಿತ್ತು. ಜೆಸಿಬಿ ಚಾಲಕ ಹಾಗೂ ಸಹಾಯಕ ಅಪಾಯದಿಂದ ಪಾರಾಗಿದ್ದಾರೆ. ನಂತರ ಇನ್ನೊಂದು ಜೆಸಿಬಿಯನ್ನು ತರಿಸಿ ಮೊದಲ ಜೆಸಿಬಿಯನ್ನು ಮೇಲಕ್ಕೆ ತರಲಾಯಿತು.

ಗುಡ್ಡದ ಕೆಳಭಾಗದಲ್ಲಿ ಮೂರು ಮನೆಗಳಿದ್ದು, ಪುತ್ತಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮಾ ನಾಯಕ್ ಮುನ್ನೆಚ್ಚರಿಕೆ ಕ್ರಮವಾಗಿ ವಿಜಿತ್, ವಿನ್ಸೆಂಟ್ ಸಿಕ್ಷೇರಾ ಮತ್ತು ಸಿಸಿಲಿಯಾ ಅವರ ಕುಟುಂಬಗಳ ಸ್ಥಳಾಂತರಕ್ಕೆ ಸೂಚಿಸಿದ್ದಾರೆ. ಗುಡ್ಡದಿಂದ ಮತ್ತೆ ಮಣ್ಣು ಕುಸಿಯುವ ಅಪಾಯ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪಾಲಡ್ಕ-ಕಲ್ಲಮುಂಡ್ಕೂರು ಸಂಪರ್ಕ ರಸ್ತೆಯನ್ನು ತಹಶಿಲ್ದಾರ್ ಪ್ರದೀಪ್ ಹುರ್ಡೇಕರ್‌ ಮುಂದಿನ ಆದೇಶದವರೆಗೆ ಬಂದ್ ಮಾಡಿಸಿದ್ದಾರೆ.

ಈ ರಸ್ತೆಯಲ್ಲಿ ಸಾರ್ವಜನಿಕರ ಓಡಾಟಕ್ಕೂ ನಿರ್ಬಂಧ ವಿಧಿಸಲಾಗಿದೆ. ಪರಿಸರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಕಂದಾಯ ನಿರೀಕ್ಷಕ ಮಂಜುನಾಥ, ದ.ಕ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಮೆಸ್ಕಾಂ, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮುಂಜಾಗೃತಾ ಕ್ರಮ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT