ಮಂಗಳೂರು: ಚೆನ್ನೈನ ಹೈನಾಸ್ ಏರ್ಬೋರ್ನ್ ವನ್ ತಂಡವು ಆಲ್ ಇಂಡಿಯಾ ಅಲ್ಟಿಮೇಟ್ ಬೀಚ್ ನ್ಯಾಷನಲ್ಸ್ನ ಮುಕ್ತ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಇಂಡಿಯಾ ಅಲ್ಟಿಮೇಟ್ ಸಹಯೋಗದಲ್ಲಿ ಕರ್ನಾಟಕ ಅಲ್ಟಿಮೇಟ್ ಪ್ಲೇಯರ್ಸ್ ಅಸೋಸಿಯೇಷನ್ (ಕೆಯುಪಿಎ) ನಗರದ ತಣ್ಣೀರುಬಾವಿಯ ಬ್ಲೂ ಬೇ ಇಕೊ ಬೀಚ್ನಲ್ಲಿ ಆಯೋಜಿಸಿದ್ದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹೈನಾಸ್ ಏರ್ಬೋರ್ನ್ ವನ್ ತಂಡವು 11–10ರಿಂದ ಚೆನ್ನೈನ ಸ್ಟಾಲ್ 7 (2) ತಂಡವನ್ನು ಭಾನುವಾರ ಮಣಿಸಿತು.

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪುಯಲ್ 4 ತಂಡವು 12–9ರಿಂದ ಕಲ್ಲಹನ್ಸ್ ಓಪನ್ಸ್ 3 ತಂಡವನ್ನು ಸೋಲಿಸಿತು.

ಚೆನ್ನೈನ ವಲೈ ತಂಡ ಅಜೇಯರಾಗಿ ಉಳಿದು ಇಂಡಿಯಾ ಅಲ್ಟಿಮೇಟ್ ಬೀಚ್ ನ್ಯಾಷನಲ್ಸ್ನ ಮಹಿಳೆಯರ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿತು. ಫೈನಲ್ನಲ್ಲಿ ಈ ತಂಡವು ಬೆಂಗಳೂರಿನ ಏರ್ ಬೆಂಡರ್ಸ್ ಒನ್ ತಂಡವನ್ನು 9–8ರಿಂದ ಸೋಲಿಸಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಥಳೀಯ ಉದ್ಯಮಿ ಯತೀಶ್ ಬೈಕಂಪಾಡಿ, ಯಂಗ್ ಇಂಡಿಯನ್ಸ್ನ ಶರಣ್ ಶೆಟ್ಟಿ, ಇಂಡಿಯಾ ಅಲ್ಟಿಮೇನ್ನ ಅಲೆಕ್ಸ್ ಸೆಬಾಸ್ಟಿಯನ್, ಕೆಯುಪಿಎಯ ಅಭಿಜಿತ್ ಕುಮಾರ್ ಭಾಗವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.