ಬುಧವಾರ, ಫೆಬ್ರವರಿ 26, 2020
19 °C
ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಸಭೆ

ರಾಮನಾಗಿ ಬದುಕುವುದೇ ರಾಮರಾಜ್ಯ: ವಿನಯ್‌ ಗುರೂಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಳ್ಳಾಲ: ‘ರಾಮನಾಗಿ ಬದುಕುವುದೇ ರಾಮರಾಜ್ಯ, ರಾಮನ ಆದರ್ಶಗಳನ್ನು ಮೈಗೂಡಿಸಿ ಬದುಕುವುದೇ ಧರ್ಮ. ಅಹಂಕಾರವನ್ನು ಕಳೆದುಕೊಳ್ಳುವವನೇ ಗುರು. ಇದು ಸನಾತನ ಹಿಂದೂ ಧರ್ಮ’ ಎಂದು ಕೊಪ್ಪ ದತ್ತ ಆಶ್ರಮದ ವಿನಯ ಗುರೂಜಿ ಅಭಿಪ್ರಾಯಪಟ್ಟರು.

ಹಿಂದೂ ಜಾಗರಣ ವೇದಿಕೆ , ಓಂ ಶಕ್ತಿ ಘಟಕ ಕುಂಪಲ ಆಶ್ರಯದಲ್ಲಿ ನವೋದಯ ಮೈದಾನ ಮೂರುಕಟ್ಟೆಯಲ್ಲಿ ಜರುಗಿದ 10ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಸಭೆಯಲ್ಲಿ ಅವರು ಮಾತನಾಡಿದರು.

‘ಹಿಂದೂ ಧರ್ಮದ ದ್ವೈತ್ವವನ್ನು ಬೈಬಲ್, ಕುರಾನ್‌ನಲ್ಲಿ ಹೇಳಲಾಗಿದೆ. ಆದರೆ ಇದನ್ನು ಒಪ್ಪಲು ಸಿದ್ಧರಿಲ್ಲ.  ಶಾಸ್ತ್ರ ವನ್ನು ಮೀರಿರುವುದು ಸತ್ಯ. ಭೌತಿಕವಾಗಿ ಗಟ್ಟಿ ಇರುವ ಹಿಂದೂಗಳು ತಾತ್ವಿಕವಾಗಿ ಇಲ್ಲ. ಇತರ ಧರ್ಮಗಳಲ್ಲಿ ಗ್ರಂಥಾಧ್ಯಯನ ಇದೆ. ಆದರೆ ಹಿಂದೂಗಳು ಗ್ರಂಥಗಳನ್ನು ಷೋಕೇಸ್‌ನಲ್ಲಿ ಹೂಗಳನ್ನಿಟ್ಟು ಪೂಜೆ ಮಾಡಲು ಮಾತ್ರ ಸೀಮಿತಿವಾಗಿರಿಸಲಾಗಿದೆ. ಕೇಸರಿ ಬಟ್ಟೆ ಉಡುವುದಷ್ಟೇ ಸನ್ಯಾಸವಲ್ಲ. ಆಸೆಗಳನ್ನು ಗೆಲ್ಲುವುದು ಕೂಡ ಸನ್ಯಾಸ’ ಎಂದರು.

‘ಧರ್ಮದ ಅಳಿವಿಗೆ ಕಾರಣ. ಜಾತಿ, ಬಡವ ಶ್ರಿಮಂತ , ಮಡಿ ಮೈಲಿಗೆ ಎಲ್ಲವನ್ನೂ ದೂರವಾಗಿರಿಸಬೇಕು. ಧಾರ್ಮಿಕ, ಲೌಕಿಕ ಶಿಕ್ಷಣ ಹಾಗೂ ದೇವಸ್ಥಾನದ ಹಣವನ್ನು ಬಡವರಿಗೆ ವಿನಿಯೋಗಿಸುವುದರಿಂದ ಸಮಾಜದ ಏಳಿಗೆಯೂ ಸಾಧ್ಯ’ ಎಂದರು.

ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಕೆ.ಟಿ ಉಲ್ಲಾಸ್ ದಿಕ್ಸೂಚಿ ಭಾಷಣ ಮಾಡಿದರು. ಗಿನ್ನೆಸ್ ದಾಖಲೆ ಬರೆದ ಪುಟಾಣಿ ಆದ್ಯ ಅಶ್ವಿನ್ ಅವರನ್ನು ಸನ್ಮಾನಿಸಲಾಯಿತು.

 ಉಳ್ಳಾಲ್ತಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಕುತ್ತಾರ್ ಅಧ್ಯಕ್ಷತೆ  ವಹಿಸಿದ್ದರು. ಹಿಂದೂ ಜಾಗರಣ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ .ಕೆ ಶಕ್ತಿನಗರ, ಉದ್ಯಮಿಗಳಾದ ಹರೀಶ್ ಶೆಟ್ಟಿ, ಅರವಿಂದ್ ಬೆಂಗ್ರೆ, ಸುಜಿತ್ ಕಂಬ್ಳಪದವು, ಗುರುಪ್ರಸಾದ್ ಭಟ್, ತಿರುಮಲೇಶ್ವರ್ ಭಟ್, ವಕೀಲ ಮಹೇಶ್ ಜೋಗಿ, ಮುಖ್ಯ ಅತಿಥಿಗಳಾಗಿದ್ದರು.  ಸಾಮಾಜಿಕ ಕಾರ್ಯಕರ್ತೆ ಪ್ರಭಾ ವಿಠಲ್, ವೇದಿಕೆ ಪ್ರಖಂಡದ ಸಂಚಾಲಕ ಪ್ರಕಾಶ್ ಕುಂಪಲ , ಕುಂಪಲ ಮೊಸರುಕುಡಿಕೆ ಉತ್ಸವದ ಗೌರವಾಧ್ಯಕ್ಷ ಸೋಮೇಶೇಖರ್ ಕೆ. ಜಗತಾಪು , ಪ್ರವೀಣ್.ಯಸ್ ಕುಂಪಲ  ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು