ಬಕ್ರೀದ್‌ಗೆ ಸಹಪಾಠಿ ಮನೆಗೆ ತೆರಳುತ್ತಿದ್ದ ಹಿಂದೂ ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

7

ಬಕ್ರೀದ್‌ಗೆ ಸಹಪಾಠಿ ಮನೆಗೆ ತೆರಳುತ್ತಿದ್ದ ಹಿಂದೂ ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

Published:
Updated:

ಪುತ್ತೂರು: ಬೆಟ್ಟಂಪಾಡಿ ಸಮೀಪದ ರೆಂಜದಲ್ಲಿ ಬುಧವಾರ ಬಕ್ರೀದ್ ಹಬ್ಬದಲ್ಲಿ ಪಾಲ್ಗೊಳ್ಳಲು ಮುಸ್ಲಿಂ ವಿದ್ಯಾರ್ಥಿಯ ಮನೆಗೆ ಬರುತ್ತಿದ್ದ ಹಿಂದೂ ಸಹಪಾಠಿ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಹಿಡಿದು ಸಂಪ್ಯ ಪೊಲೀಸರಿಗೆ ಒಪ್ಪಿಸಿದ ವಿದ್ಯಮಾನ ನಡೆದಿದೆ.

ಮಂಗಳೂರಿನ ಅಡ್ಯಾರು ಬಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿ ಅಬ್ದುಲ್ ಶಮೀರ್ ಅವರ ಮನೆಗೆ ಹೋಗಲು ಕಾಲೇಜಿನ ಐವರು ಹಿಂದೂ ವಿದ್ಯಾರ್ಥಿನಿಯರು ಹಾಗೂ ಐವರು ಮುಸ್ಲಿಂ ವಿದ್ಯಾರ್ಥಿಗಳು ಬಸ್‌ನಲ್ಲಿ ಬಂದಿದ್ದರು. ಅವರು ರೆಂಜದಲ್ಲಿ ಇಳಿದು ಮನೆಗೆ ಹೋಗಲು ರಿಕ್ಷಾವೊಂದನ್ನು ಬಾಡಿಗೆಗೆ ಗೊತ್ತುಪಡಿಸಿದ್ದರು. ಈ ವೇಳೆ ರಿಕ್ಷಾ ಚಾಲಕ ವಿಚಾರಿಸಿದಾಗ ಬಕ್ರೀದ್ ಹಬ್ಬದೂಟಕ್ಕಾಗಿ ಅಬ್ದುಲ್ ಶಮೀರ್ ಮನೆಗೆ ಹೋಗುವುದಾಗಿ ತಿಳಿಸಿದ್ದರು. ರಿಕ್ಷಾ ಚಾಲಕ ಅವರನ್ನು ಮನೆಗೆ ಬಿಡಲು ನಿರಾಕರಿಸಿದ್ದಲ್ಲದೆ ವಿಎಚ್‌ಪಿ ಮತ್ತು ಇತರ ಹಿಂದೂಪರ ಸಂಘಟನೆಗಳ ಗಮನಕ್ಕೆ ಈ ವಿಚಾರವನ್ನು ತಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಬಳಿಕ ಮುಸ್ಲಿಂ ರಿಕ್ಷಾ ಚಾಲಕರೊಬ್ಬರ ನೆರವು ಪಡೆದು ಮನೆಯತ್ತ ತೆರಳಲು ಯತ್ನಿಸಿದಾಗ ಅದಕ್ಕೆ ತಡೆ ಒಡ್ಡಲಾಯಿತು. ಆಗ ಮೂವರು ವಿದ್ಯಾರ್ಥಿನಿಯರು ಅಲ್ಲಿಂದ ತಪ್ಪಿಸಿಕೊಂಡರು.  ಉಳಿದ ವಿದ್ಯಾರ್ಥಿಗಳನ್ನು ಹಿಂದೂಪರ ಸಂಘಟನೆಗಳ ಸದಸ್ಯರು ಸಂಪ್ಯ ಠಾಣೆಗೆ ಕರೆತಂದು ಪೊಲೀಸರಿಗೆ ಒಪ್ಪಿಸಿದ್ದರು.

ಹಿಂದೂ ವಿದ್ಯಾರ್ಥಿನಿಯರು ಮುಸ್ಲಿಂ ವಿದ್ಯಾರ್ಥಿಗಳ ಜೊತೆ ರೆಂಜದ ಗುಡ್ಡದ ಬಳಿ ತಿರುಗಾಡುತ್ತಿದ್ದರೆಂಬ ದೂರನ್ನು ಹಿಂದೂಪರ ಸಂಘಟನೆಯವರು ಪೊಲೀಸರಿಗೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಅನೈತಿಕ ಪೊಲೀಸ್‍ಗಿರಿ ಆರೋಪ ಹೊರಿಸಿ ದೂರು ನೀಡಿದ್ದಾರೆ.

ಪೊಲೀಸರು ಸ್ಥಳೀಯ ವಿಎಚ್‌ಪಿ ಮುಖಂಡ ಸೇಸಪ್ಪ, ರುಕ್ಮಯ, ರಿಕ್ಷಾ ಚಾಲಕ ಸತೀಶ್, ಸೇರಿದಂತೆ 5 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !