ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೈಡ್ರೊ ಸ್ಕ್ವೀಜ್ ಸೆಪರೇಟರ್’ ಯಂತ್ರಕ್ಕೆ ಪೇಟೆಂಟ್

Last Updated 19 ಮೇ 2022, 2:21 IST
ಅಕ್ಷರ ಗಾತ್ರ

ಮಂಗಳೂರು: ಎನ್‌ಐಟಿಕೆ ಅಭಿವೃದ್ಧಿಪಡಿಸಿದ ಸೀಮಿತ ನೀರಿನ ಬಳಕೆಯಿಂದ ಶುದ್ಧ ಕಲ್ಲಿದ್ದಲನ್ನು ಉತ್ಪಾದಿಸಲು ಹೈಡ್ರೊ ಸ್ಕ್ವೀಜ್ ಸೆಪರೇಟರ್ ಎಂಬ ಆರ್ದ್ರ ಸಂಸ್ಕರಣಾ ಯಂತ್ರಕ್ಕೆ ಪೇಟೆಂಟ್ ದೊರೆತಿದೆ.

ಮೃದುವಾದ ವಸ್ತುಗಳನ್ನು ಪುಡಿ ಮಾಡುವ ಮತ್ತು ಬೇರ್ಪಡಿಸುವ ಕೆಲಸ ಮಾಡುವ ಈ ಯಂತ್ರವನ್ನು ಸುಲಭವಾಗಿ ಬಳಕೆ ಮಾಡಬಹುದು. ನಿರ್ವಹಣೆ ವೆಚ್ಚವೂ ಕಡಿಮೆಯಾಗಿದೆ. ಹರೀಶ್ ಹನುಮಂತಪ್ಪ, ಪ್ರೊ. ಹರ್ಷವರ್ಧನ್, ಪ್ರೊ. ಗೋವಿಂದ ರಾಜ್ ಮಂಡೇಲಾ, ಭರತ್ ಕುಮಾರ್ ಷಣ್ಮುಗಂ, ಮುದುನೂರು ವರ್ಮರಾಜು, ಹರೀಶ್ ಕುಮಾರ್ ಎನ್. ಎಸ್. ಒಳಗೊಂಡ ತಂಡವು ಈ ಯಂತ್ರವನ್ನು ಅಭಿವೃದ್ಧಿಪಡಿಸಿದೆ.

ಯಂತ್ರ ತಯಾರಿಕೆಗೆ ಹೆಚ್ಚಿನ ವೆಚ್ಚವಾಗುವುದರಿಂದ ಪ್ರಯೋಗಾಲಯ ಬಳಕೆಗೆ ಸೀಮಿತವಾಗಿ ತಯಾರಿಸಲಾಗಿದೆ. ಹೂಡಿಕೆಯಲ್ಲಿ ಆಸಕ್ತಿ ಇರುವವರ ಸಹಾಯದಿಂದ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಬಹುದು. ಅಭಿವೃದ್ಧಿಪಡಿಸಿದ ಪ್ರಯೋಗಾಲಯ ಮಟ್ಟದ ಯಂತ್ರವು ಗಂಟೆಗೆ 24 ಕೆ.ಜಿ ಕಲ್ಲಿದ್ದಲನ್ನು ಪರಿಣಾಮಕಾರಿಯಾಗಿ ಸಂಸ್ಕರಿಸುತ್ತದೆ. ಇದಕ್ಕೆ ಅಂದಾಜು ₹ 1.5 ಲಕ್ಷ ವೆಚ್ಚ ತಗುಲಿದೆ ಎಂದು ಎನ್‌ಐಟಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT