ಬಂಟ್ವಾಳ: ತಾಲ್ಲೂಕಿನ ಕಕ್ಯಪದವು ಸಮೀಪದ ಇಳಿಯೂರು ಮಹಾವಿಷ್ಣು ದೇವಸ್ಥಾನದ ಗರ್ಭಗುಡಿಗೆ ಶನಿವಾರ ಸಿಡಿಲು ಬಡಿದು ಭಾರಿ ಹಾನಿ ಉಂಟಾಗಿದೆ.

ತಾಲ್ಲೂಕಿನಾದ್ಯಂತ ಶನಿವಾರ ಸಂಜೆ ಗುಡುಗು ಮಿಂಚು ಸಿಡಿಲು ಸಹಿತ ಭಾರಿ ಗಾಳಿ ಮಳೆ ಸುರಿಯಿತು. ದೇವಸ್ಥಾನದ ಶಿಲಾಮಯ ಗರ್ಭಗುಡಿ ಮೇಲಿನ ಅಂತಸ್ತು ಹಾನಿಗೊಳಗಾಗಿದೆ. ಸಿಡಿಲಿನ ಅಬ್ಬರಕ್ಕೆ ಶಿಲೆಯ ತುಂಡುಗಳು ಚೂರಾಗಿ ದೇವಸ್ಥಾನದ ಪ್ರಾಂಗಣಕ್ಕೆ ಬಿದ್ದಿವೆ. ಸಿಡಿಲು ಬಡಿದ ಸಂದರ್ಭದಲ್ಲಿ ದೇವಸ್ಥಾನದ ಒಳಗೆ ಭಕ್ತರು ಯಾರು ಇರಲಿಲ್ಲ.

4 ವರ್ಷಗಳ ಹಿಂದಷ್ಟೇ ₹ 3.50 ಕೋಟಿ ವೆಚ್ಚದಲ್ಲಿ ಈ ದೇವಸ್ಥಾನದ ಪುನರ್ನಿರ್ಮಾಣ ಕಾರ್ಯ ಹಾಗೂ ಬ್ರಹ್ಮಕಲಶೋತ್ಸವ ನಡೆದಿತ್ತು. ಕೋವಿಡ್ ಸಂಕಷ್ಟದ ನಡುವೆ ನೂರಾರು ಮಂದಿ ಭಕ್ತರು ಶ್ರಮದಾನ ನಡೆಸುವ ಮೂಲಕ ದೇವಾಲಯಕ್ಕೆ ನಿರ್ಮಾಣಕ್ಕೆ ಸಹಕರಿಸಿದ್ದರು. ಈ ಅವಘಡವು ಭಕ್ತರಲ್ಲಿ ಆತಂಕ ಮೂಡಿಸಿದೆ ಎಂದು ದೇವಳದ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-29-873357719

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.