ಗುರುವಾರ , ಅಕ್ಟೋಬರ್ 17, 2019
21 °C

ಅನಧಿಕೃತ ಪೇಯಿಂಗ್‌ ಗೆಸ್ಟ್‌ ವಸತಿ ತೆರವು

Published:
Updated:
Prajavani

ಮಂಗಳೂರು: ನಗರದ ಶ್ರೀದೇವಿ ಕಾಲೇಜು ರಸ್ತೆಯ ಅಪಾರ್ಟ್‌ವೊಂದರಲ್ಲಿ ಕಾರ್ಯಾಚರಿಸುತ್ತಿದ್ದ ಅನಧಿಕೃತ ‘ಪೇಯಿಂಗ್‌ ಗೆಸ್ಟ್‌’ (ಪಿ.ಜಿ.)ವಸತಿಯನ್ನು ಮಂಗಳೂರು ನಗರ ಪಾಲಿಕೆ ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿದರು.

ಪಾಲಿಕೆ ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ, ಪೊಲೀಸ್‌  ಸಿಬ್ಬಂದಿ ನೆರವಿನೊಂದಿಗೆ ಪಿ.ಜಿ.ಗೆ ಬೀಗಹಾಕಿ ದರ ವ್ಯವಹಾರವನ್ನು ಸ್ಥಗಿತಗೊಳಿಸಿದ್ದಾರೆ.  ಪಿ.ಜಿ. ತೆರವು ಮಾಡುವಂತೆ ಪಾಲಿಕೆಯಿಂದ ಹಲವು ಬಾರಿ ನೋಟಿಸ್‌ ನೀಡಿದ್ದರೂ ಮಾಲೀಕರು ನಿರ್ಲಕ್ಷ್ಯಿಸಿದ ಕಾರಣ ಕ್ಷಿಪ್ರ ಕಾರ್ಯಾಚರಣೆ ನಡೆಸಲಾಯಿತು ಎಂದು ತಿಳಿಸಲಾಗಿದೆ.

ಪಾಲಿಕೆ ಆರೋಗ್ಯ ನಿರೀಕ್ಷಕರಾದ ಯಶವಂತ್‌, ಕರಣಾಕರ್‌, ದೀಪಕಾ, ರಕ್ಷಿತಾ ಕಾರ್ಯಾಚರಣೆಯಲ್ಲಿ  ಪಾಲ್ಗೊಂಡಿದ್ದರು  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post Comments (+)