ಸುಬ್ರಹ್ಮಣ್ಯ: ಎಡಮಂಗಲ ಗ್ರಾಮದ ಮುರುಳ್ಯ ಕೇರ್ಪಡ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಪವಿತ್ರ ತೀರ್ಥಕೆರೆ ಮತ್ತು ತೀರ್ಥ ಬಾವಿ ಲೋಕಾರ್ಪಣೆಗೊಂಡಿತು.

ಕೆಮ್ಮಿಂಜೆ ನಾಗೇಶ ತಂತ್ರಿ ಅವರ ನೇತೃತ್ವದಲ್ಲಿ ವಿವಿಧ ವೈದಿಕ ವಿಧಿ–ವಿಧಾನಗಳು ನಡೆದವು.

ಆರಂಭದಲ್ಲಿ ಕೆರೆಯ ಸುತ್ತ ಹಣತೆ ಬೆಳಗಿ ದೀಪೋತ್ಸವ ನೆರವೇರಿತು. ಬಳಿಕ ಋತ್ವಿಜರು ಗಂಗಾಪೂಜೆ, ಗಂಗಾರತಿ, ಗೋಪೂಜೆ ನೆರವೇರಿಸಿದರು.

ಒಡಿಯೂರಿನ ಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷೆ ಭಾಗೀರಥಿ ಮುರುಳ್ಯ ಪವಿತ್ರ ಗಂಗೆಗೆ ಪುಷ್ಪಾರ್ಚನೆ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಕ್ಷೀರ ಸಮರ್ಪಣೆ ಮಾಡಿದರು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ ಆಲಾಜೆ, ರೂಪರಾಜ ರೈ ಕೆ., ನಾಗೇಶ್ ಆಳ್ವ ಕಟ್ಟಬೀಡು, ಯೋಗಾನಂದ ಉಳ್ಳಲಾಡಿ, ಭಾಗ್ಯಪ್ರಸನ್ನ, ರಘುನಾಥ ಎಂಜೀರು, ವಾರಿಜಾಕ್ಷಿ ಕೇರ್ಪಡ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಶಿವಾನಂದ ಬೊಳ್ಕಜೆ, ಪ್ರಧಾನ ಕಾರ್ಯದರ್ಶಿ ಅನೂಪ್ ಕುಮಾರ್ ಆಳ್ವ, ವಾಗ್ಮಿ ಹಾರಿಕಾ ಮಂಜುನಾಥ್ ಭಾಗವಹಿಸಿದ್ದರು.

ದೇವಳದ ಸಮೀಪ ತೀರ್ಥಕೆರೆಯ ಜಲದಲ್ಲಿ ಔಷಧೀಯ ಗುಣಗಳು ಇದ್ದು, ತೀರ್ಥಸ್ನಾನ ಮಾಡಿದರೆ ಸಕಲ ಚರ್ಮರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಇದೀಗ ತೀರ್ಥಕೆರೆಯನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ. ಸುತ್ತಲೂ ಉದ್ಯಾನ, ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ಪಕ್ಕದಲ್ಲಿರುವ ಪವಿತ್ರ ತೀರ್ಥ ಬಾವಿಯನ್ನೂ ಪುನರ್ನಿರ್ಮಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.