ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಧ್ವಜ ತಯಾರಿಯಲ್ಲಿ 152 ಕುಟುಂಬಶ್ರೀ ಘಟಕಗಳು

Last Updated 6 ಆಗಸ್ಟ್ 2022, 4:31 IST
ಅಕ್ಷರ ಗಾತ್ರ

ಕಾಸರಗೋಡು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ‘ಹರ್ ಗರ್ ತಿರಂಗ’ದ ಭಾಗವಾಗಿ ಜಿಲ್ಲೆಯಲ್ಲಿ ಕುಟುಂಬಶ್ರೀ ಒಕ್ಕೂಟಗಳು 1,49,633 ರಾಷ್ಟ್ರ ಧ್ವಜ ತಯಾರಿಯಲ್ಲಿ ತೊಡಗಿವೆ. ಆಗಸ್ಟ್ 13ರಿಂದ 15ರವರೆಗೆ ಮನೆಗಳಲ್ಲಿ, ವಿದ್ಯಾ ಸಂಸ್ಥೆಗಳಲ್ಲಿ, ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಈ ಧ್ವಜಗಳನ್ನು ಹಾರಿಸಬಹುದು.

152 ಕುಟುಂಬಶ್ರೀ ಘಟಕಗಳು ಧ್ವಜಗಳನ್ನು ತಯಾರಿಸುತ್ತಿವೆ. ಧ್ವಜಸಂಹಿತೆ ಮಾನದಂಡದ ಪ್ರಕಾರ 3:2 ಎಂಬ ಅನುಪಾತದಲ್ಲಿ ರಾಷ್ಟ್ರಧ್ವಜಗಳನ್ನು ಜಿಲ್ಲೆಯಲ್ಲಿ ತಯಾರಿಸಲಾಗುತ್ತಿದೆ. ₹ 30 ಬೆಲೆಯನ್ನು ಈ ರಾಷ್ಟ್ರಧ್ವಜಕ್ಕೆ ನಿಗದಿ ಮಾಡಲಾಗಿದೆ. ಹೆಚ್ಚು ಧ್ವಜಗಳ ಅಗತ್ಯ ಬಿದ್ದಲ್ಲಿ ಅಗತ್ಯಕ್ಕೆ ಅನುಸಾರವಾಗಿ ತಯಾರಿಸಿ ಕೊಡಲಾಗುವುದು ಎಂದು ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್ ಹೇಳಿದ್ದಾರೆ.

ಪಳ್ಳಿಕ್ಕೆರೆ ಪಂಚಾಯಿತಿಯ ಬ್ಲೋಸ್ಸಂ ಕುಟುಂಬಶ್ರೀ ಒಕ್ಕೂಟಕ್ಕೆ 6000 ಧ್ವಜಗಳನ್ನು ತಯಾರಿಸುವ ಆರ್ಡರ್ ಪಡೆದಿದೆ. ಇಲ್ಲಿ ಒಬ್ಬರು ಸರಿಯಾದ ಅಳತೆಯಲ್ಲಿ ಬಟ್ಟೆಯನ್ನು ಕತ್ತರಿಸಿ ನೀಡುತ್ತಾರೆ. 5 ಮಂದಿ ಧ್ವಜ ತಯಾರಿ ಕಾರ್ಯದಲ್ಲಿ ತೊಡಗಿದ್ದಾರೆ. ಒಂದು ದಿನ 600 ಧ್ವಜಗಳನ್ನು ಇಲ್ಲಿ ತಯಾರಿಸಲಾಗುವುದೆ ಎಂದು ಪಲ್ಲಿಕ್ಕೆರೆ ಬ್ಲೋಸ್ಸಂ ಕುಟುಂಬಶ್ರೀ ಕಾರ್ಯದರ್ಶಿ ಎಸ್.ವಿ. ಸೆಮೀರಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT