ಮಂಗಳೂರು: ಮಧ್ಯಾಹ್ನ ಮತ್ತು ರಾತ್ರಿ ಊಟ ಸೇರಿದಂತೆ ದಿನದ ಮೂರು ಹೊತ್ತು ಕಡಿಮೆ ಬೆಲೆಗೆ ಉತ್ತಮ ಆಹಾರ ಕೊಡುವ ಇಂದಿರಾ ಕ್ಯಾಂಟೀನ್ ಸರ್ಕಾರದ ಬಿಲ್ ಪಾವತಿ ಬಾಕಿ ಇದ್ದರೂ ಜಿಲ್ಲೆಯಲ್ಲಿ ನಿರಾತಂಕವಾಗಿ ಸಾಗುತ್ತಿದೆ.

ನಗರದ ಐದು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 13 ಇಂದಿರಾ ಕ್ಯಾಂಟೀನ್ಗಳು ಕಾರ್ಯನಿರ್ವಹಿಸುತ್ತಿವೆ. ಹೊಸ ಆರು ಕ್ಯಾಂಟೀನ್ಗಳು ಉದ್ಘಾಟನೆಗೂ ಸಜ್ಜಾಗಿವೆ. ಆದರೆ, ಮೂರು ಪಾಲುಗಳಲ್ಲಿ ಪೌರಾಡಳಿತ ಇಲಾಖೆಯ ಪಾಲಿನ ಹಣ ದೊಡ್ಡ ಮೊತ್ತ ಬಾಕಿ ಇದೆ ಎಂಬುದು ಮೂಲಗಳಿಂದ ತಿಳಿದು ಬರುವ ವಿಷಯ. ಇದನ್ನು ಒಪ್ಪಲು ಆಡಳಿತ ಸಿದ್ಧವಿಲ್ಲ.

ನಗರ ವ್ಯಾಪ್ತಿಯ ಕ್ಯಾಂಟೀನ್ಗಳ ನಿರ್ವಹಣೆಯ ಉಸ್ತುವಾರಿಯನ್ನು ಚೆಫ್ ಟಾಪ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಕಂಪನಿ ಹಾಗೂ ಜಿಲ್ಲೆಯ ಇತರ ಕ್ಯಾಂಟೀನ್ಗಳನ್ನು ರಿವಾರ್ಡ್ಸ್ ಕಂಪನಿ ಟೆಂಡರ್ನಲ್ಲಿ ಪಡೆದುಕೊಂಡಿದೆ. ಗ್ರಾಹಕರು ಪಾವತಿಸುವ ಹಣ ತಕ್ಷಣ ಸಿಗುತ್ತದೆ. ಸ್ಥಳೀಯಾಡಳಿತದ ಪಾಲು ಕೂಡ ಪಾವತಿ ಆಗುತ್ತಿದೆ. ಆದರೆ ಸರ್ಕಾರದ ಕಡೆಯಿಂದ ಪೌರಾಡಳಿತ ಇಲಾಖೆ ನೀಡಬೇಕಾದ ಪಾಲಿನ ಹಣ ಸಿಗಲಿಲ್ಲ ಎಂದು ಕೆಲವು ಕ್ಯಾಂಟೀನ್ನವರು ತಿಳಿಸುತ್ತಾರೆ.

2025ರ ಮಾರ್ಚ್ ತಿಂಗಳಿಂದ ಇಲಾಖೆಯ ಮೊತ್ತ ಬಾಕಿ ಇದೆ ಎಂಬುದು ಕ್ಯಾಂಟೀನ್ ಮೂಲಗಳ ಮಾಹಿತಿ. ಆದರೆ, ಅದೊಂದು ಚರ್ಚಾ ವಿಷಯವಲ್ಲ. ಕಾಲಕಾಲಕ್ಕೆ ಆ ಹಣ ಸಂದಾಯ ಆಗುತ್ತದೆ. ಈಗ ಸ್ವಲ್ಪ ತಡ ಆಗಿರಬಹುದು ಎಂದು ನಗರಪಾಲಿಕೆಯ ಮೂಲಗಳು ಹೇಳುತ್ತವೆ. ಹಣ ಪಾವತಿ ಬಾಕಿ ಇಲ್ಲವೇ ಇಲ್ಲ ಎಂಬುದು ಜಿಲ್ಲೆಯ ನಗರಾಭಿವೃದ್ಧಿ ಘಟಕದ ಯೋಜನಾಧಿಕಾರಿಯ ವಿವರಣೆ.

ಮೂರು ದಿನಗಳ ಹಿಂದೆ, ಮಾ.21ರಂದು ವಿಧಾನಸಭೆ ಅಧಿವೇಶನದಲ್ಲಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ಅವರು ಕೇಳಿದ ಪ್ರಶ್ನೆಯಲ್ಲಾಗಲಿ ನಗರಾಭಿವೃದ್ಧಿ ಇಲಾಖೆ ನೀಡಿದ ಉತ್ತರದಲ್ಲಾಗಲಿ ಬಿಲ್ ಬಾಕಿ ಇರುವ ವಿಷಯದ ಪ್ರಸ್ತಾಪವಿಲ್ಲ. ಮಂಗಳೂರಿನಲ್ಲಿರುವ ಕ್ಯಾಂಟೀನ್ಗಳ ಸಂಖ್ಯೆ, ಗುಣಮಟ್ಟ, ಮುಚ್ಚುವ ಭೀತಿ ಇದೆಯೇ ಮುಂತಾದ ವಿಷಯಗಳು ಉಲ್ಲೇಖವಾಗಿದ್ದವು.

ಹೊಸ ಮೆನುವಿಗೆ ಸಾಧ್ಯತೆ ಇಲ್ಲವೇ?

ಜಿಲ್ಲೆಯ ಇಂದಿರಾ ಕ್ಯಾಂಟೀನ್ಗಳಲ್ಲಿ ಬೆಳಿಗ್ಗೆ ಇಡ್ಲಿಯ ಜೊತೆಯಲ್ಲಿ ಸ್ಥಳೀಯ ಆಹಾರವಾದ ನೀರುದೋಸೆ, ಸಜ್ಜಿಗೆ ಅವಲಕ್ಕಿ, ಪುಂಡಿ ಗಸಿ, ಸೇವಿಗೆ, ಕಡಲೆ ಅವಲಕ್ಕಿ, ಮಂಗಳೂರು ಬನ್ಸ್, ಊಟಕ್ಕೆ ಗಂಜಿ, ಕುಚ್ಚಲಕ್ಕಿ ಅನ್ನ, ಅಕ್ಕಿರೊಟ್ಟಿ ಸೇರಿದಂತೆ ಪಟ್ಟಿ ದೊಡ್ಡದಿದೆ. ಇನ್ನೂ ಸ್ಥಳೀಯ ಆಹಾರ ಸೇರಿಸಿ ಮೆನು ಪರಿಷ್ಕರಿಸಬೇಕು ಎಂಬ ಬೇಡಿಕೆ ಇದೆ. ಆದರೆ 2023ರಲ್ಲೇ ಮೆನು ಬದಲಿಸಿ ಬೇಕಾದಷ್ಟು ವೈವಿಧ್ಯತೆಯನ್ನು ಅಳವಡಿಸಿರುವುದರಿಂದ ಇನ್ನೊಂದು ಬದಲಾವಣೆ ಅಸಾಧ್ಯ ಎಂದು ಕ್ಯಾಂಟೀನ್ ಉಸ್ತುವಾರಿ ನೋಡಿಕೊಳ್ಳುವವರು ಹೇಳುತ್ತಾರೆ. ಬದಲಾವಣೆ ಅಗತ್ಯವೂ ಇಲ್ಲ ಎಂಬುದು ಅವರ ಅಭಿಪ್ರಾಯ.

13 ಜಿಲ್ಲೆಯಲ್ಲಿರುವ ಒಟ್ಟು ಕ್ಯಾಂಟೀನ್ಗಳು

5ಮಂಗಳೂರು ನಗರದ ಕ್ಯಾಂಟೀನ್ಗಳು

10ಮಾಸ್ಟರ್ ಕಿಚನ್ಗಳು

ಚಾಲ್ತಿಯಲ್ಲಿರುವ ಕ್ಯಾಂಟೀನ್ಗಳು
ಮಂಗಳೂರು (5), ಉಳ್ಳಾಲ, ಪುತ್ತೂರು, ಬಂಟ್ವಾಳ, ಸುಳ್ಯ, ಬೆಳ್ತಂಗಡಿ, ಮೂಡುಬಿದಿರೆ, ಮೂಲ್ಕಿ, ಕಿನ್ನಿಗೋಳಿ
ಉದ್ಘಾಟನೆಯಾಗಲಿರುವ ಕ್ಯಾಂಟೀನ್ಗಳು
ಮಂಗಳೂರು (2), ಉಳ್ಳಾಲ, ಕೋಟೆಕಾರು, ವಿಟ್ಲ, ಬಜೆಪೆ
(ಮಾಹಿತಿ: ಜಿಲ್ಲಾಡಳಿತ)

ರೈತರ ತರಕಾರಿಗೂ ಇದೆ ಬೆಲೆ ಉರ್ವದಲ್ಲಿರುವ ಮಾಸ್ಟರ್ ಕಿಚನ್ಗೆ ರೈತರು ತಾಜಾ ತರಕಾರಿ ತಂದುಕೊಟ್ಟರೆ ಖರೀದಿಸಲಾಗುತ್ತದೆ ಎಂದು ವ್ಯವಸ್ಥಾಪಕ ಮಾಧವ ಶೆಟ್ಟಿ ತಿಳಿಸಿದರು. ಒಳ್ಳೆಯ ತರಕಾರಿ ನಾವು ಬಯಸುತ್ತೇವೆ. ಹೀಗಾಗಿ ರೈತರು ದೊಡ್ಡ ಪ್ರಮಾಣದಲ್ಲಿ ತಂದುಕೊಟ್ಟರೆ ಖರೀದಿಸುತ್ತೇವೆ. ಚಿಲ್ಲರೆ ತರಕಾರಿ ಖರೀದಿಸಿದರೆ ಇಲ್ಲಿ ಬಳಸಲು ಸಾಧ್ಯವಿಲ್ಲ. ಐದು ಔಟ್ಲೆಟ್ಗಳಿಗೂ ಮೂರು ಹೊತ್ತು ಆಹಾರ ತಯಾರಿಸಲಿರುವುದರಿಂದ ಪ್ರಮಾಣ ಹೆಚ್ಚು ಬೇಕು ಎಂದು ಅವರು ಹೇಳಿದರು.

ನಿತ್ಯ ಆಹಾರಕ್ಕೆ ಆಸರೆ ಇಂದಿರಾ ಕ್ಯಾಂಟೀನ್ ಬಂದ ನಂತರ ಊಟಕ್ಕೇನೂ ಸಮಸ್ಯೆ ಇಲ್ಲ ಎನ್ನುತ್ತಾರೆ ಉರ್ವದಲ್ಲಿ ವಾಚ್ ರಿಪೇರಿ ಅಂಗಡಿ ನಡೆಸುತ್ತಿರುವ ಸುರೇಶ್ ಅಂಚನ್. ಮನೆ ಸ್ವಲ್ಪ ದೂರ. ಮೊದಲೆಲ್ಲ ಬೆಳಿಗ್ಗೆ ಬರುವಾಗ ಊಟ ತೆಗೆದುಕೊಂಡು ಬರುತ್ತಿದ್ದೆ. ಈಗ ನಿತ್ಯವೂ ಇಂದಿರಾ ಕ್ಯಾಂಟೀನ್ಗೆ ಬರುತ್ತೇನೆ. ಕಡಿಮೆ ಬೆಲೆಯಲ್ಲಿ ಊಟ ತಿಂಡಿ ಸಿಗುವುದು ನಮ್ಮಂಥವರಿಗೆ ಅನುಕೂಲ. ಊಟದ ಜೊತೆಯಲ್ಲಿ ಚಪಾತಿಯೂ ಇದೆ. ಈಗ ಪಾಯಸವೂ ಸಿಗುತ್ತದೆ. ಇಷ್ಟೆಲ್ಲ ವೈವಿಧ್ಯಮಯ ಊಟವಿದೆ. ಇನ್ನೂ ಹೆಚ್ಚು ಬೇಕು ಮೆನು ಬದಲಿಸಬೇಕು ಎಂದೆಲ್ಲ ಕೇಳಬಾರದು. ಅದು ಅತಿಯಾಸೆ ಆಗಬಹುದು ಎಂದು ಅವರು ಹೇಳಿದರು.

ಜನ್ಮದಿನ ಆಚರಣೆಗೂ ಅವಕಾಶ ಇಂದಿರಾ ಕ್ಯಾಂಟೀನ್ ಗ್ರಾಹಕರಿಗೆ ಒಪ್ಪೊತ್ತಿನ ಆಹಾರ ಪ್ರಾಯೋಜಿಸಲು ಬಯಸುವುದಿದ್ದರೆ ಅದಕ್ಕೂ ಅವಕಾಶವಿದೆ. ಜನ್ಮದಿನ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಆಹಾರ ಪ್ರಾಯೋಜಿಸಬಹುದು. ಆ ದಿನ ಅಥವಾ ಆ ಹೊತ್ತು ಗ್ರಾಹಕರಿಗೆ ಉಚಿತವಾಗಿ ಆಹಾರ ನೀಡಲಾಗುತ್ತದೆ. ಒಂದ್ಹೊತ್ತಿನ ಆಹಾರ ಪೂರ್ತಿ ಅಥವಾ ವಿಶೇಷ ತಿಂಡಿಯನ್ನೂ ಪ್ರಾಯೋಜಿಸಬಹುದಾಗಿದೆ ಎಂದು ಮಾಧವ ಶೆಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.