ಮಂಗಳೂರು: ಸೇದಿ ಬಿಟ್ಟ ಬೀಡಿಯ ತುಣುಕುಗಳನ್ನು ನುಂಗಿದ 10 ತಿಂಗಳ ಕೂಸು ಮೃತ ಪಟ್ಟಿದ್ದು, ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬಿಹಾರ ರಾಜ್ಯದ ಲಕ್ಷ್ಮೀದೇವಿ ಅವರ ಕುಟುಂಬ ಅಡ್ಯಾರ್ನಲ್ಲಿ ನೆಲೆಸಿದೆ. ಅವರ ಪತಿ ಸಮಾರಂಭಗಳ ಅಲಂಕಾರ ಮಾಡುವ ಕೆಲಸ ಮಾಡಿಕೊಂಡಿದ್ದಾರೆ. ಅವರ ಗಂಡ ಸೇದಿದ್ದ ಬೀಡಿಯ ತುಣುಕುಗಳನ್ನು ಮನೆಯಲ್ಲಿ ಬಿಸಾಡಿದ್ದರು. ಮನೆಯಲ್ಲೇ ಆಡುತ್ತಿದ್ದ ಅವರ 10 ತಿಂಗಳ ಮಗು (ಅನಿಶ್ ಕುಮಾರ್) ಬೀಡಿಯ ತುಣುಕುಗಳನ್ನು ಶನಿವಾರ ಮಧ್ಯಾಹ್ನ ನುಂಗಿತ್ತು. ಆರೋಗ್ಯ ಏರುಪೇರಾಗಿದ್ದರಿಂದ ಪೋಷಕರು ಮಗುವನ್ನು ವೆನ್ಲಾಕ್ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಮಗುವು ಭಾನುವಾರ ಕೊನೆಯುಸಿರೆಳೆದಿದೆ ಎಂದು ಲಕ್ಷ್ಮೀದೇವಿ ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಸೇದಿದ ಬೀಡಿಯ ತುಣುಕುಗಳನ್ನು ಎಲ್ಲೆಂದರಲ್ಲಿ ಬಿಸಾಡದಂತೆ ಗಂಡನಿಗೆ ಹಲವು ಬಾರಿ ತಿಳಿಹೇಳಿದ್ದೆ. ಆದರೂ ಅವರು ಆ ಪರಿಪಾಟ ನಿಲ್ಲಿಸಿಲ್ಲ. ಸೇದಿದ ಬೀಡಿಯ ತುಣುಕು ಸೇವಿಸಿದ್ದರಿಂದ ಮಗುವಿನ ಆರೋಗ್ಯ ಹದಗೆಟ್ಟಿದ್ದು. ಇದರಿಂದಲೇ ಮಗುವಿನ ಪ್ರಾಣಕ್ಕೆ ಕುತ್ತುಂಟಾಗಿದೆ ಎಂದು ಲಕ್ಷ್ಮೀದೇವಿ ಆರೋಪಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.