ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ: ಶಿಶಿಲ ಬಸದಿಯಲ್ಲಿ ಅಪೂರ್ವ ಶಾಸನ ಪತ್ತೆ

Last Updated 16 ಫೆಬ್ರುವರಿ 2020, 10:54 IST
ಅಕ್ಷರ ಗಾತ್ರ

ಉಜಿರೆ: ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ನೇತೃತ್ವದಲ್ಲಿ ಬೆಳ್ತಂಗಡಿ ತಾಲ್ಲೂಕಿನ ಶಿಶಿಲದಲ್ಲಿರುವ ಬಸದಿಗೆ ಸಂಬಂಧಪಟ್ಟಂತೆ ಕ್ರಿ.ಶ. 1484ರ ಅಪೂರ್ವ ಶಾಸನ ಒಂದು ಬಸದಿಯ ಪಕ್ಕದಲ್ಲಿ ಪತ್ತೆಯಾಗಿದೆ ಎಂದು ಉಜಿರೆಯ ಡಾ. ಹಾ.ಮಾ.ನಾ. ಸಂಶೋಧನಾ ಕೇಂದ್ರದ ನಿರ್ದೇ ಶಕ ಡಾ. ಎಸ್.ಡಿ. ಶೆಟ್ಟಿ ತಿಳಿಸಿದ್ದಾರೆ.

ಶಿಲಾಶಾಸನವು 116 ಸೆಂ.ಮೀ. ಎತ್ತರ(ಉದ್ದ), 55 ಸೆಂ.ಮೀ. ಅಗಲ ಇದೆ. ಶಾಸನದಲ್ಲಿ 33 ಸಾಲುಗಳಿವೆ. ತುಳುನಾಡಿನ ರಾಜಕೀಯ ಹಾಗೂ ಧಾರ್ಮಿಕ ಹಿನ್ನೆಲೆ, ಶಿಶಿಲವು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು ಇಲ್ಲಿ ವರ್ತಕರ ಸಂಘವು ಅಸ್ತಿತ್ವದಲ್ಲಿತ್ತು ಎಂದು ತಿಳಿದು ಬರುತ್ತದೆ. ಇದರ ಬಗ್ಗೆ ವಿಶೇಷ ಅಧ್ಯಯನ ಮಾಡಬೇಕಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಶಿಶಿಲದಲ್ಲಿ ಜೈನ ಅರಸರ ಆಳ್ವಿಕೆ ಇದ್ದು ಅರಮನೆ, ಕೋಟೆ, ಕೊತ್ತಳದ ಕುರುಹುಗಳು ಪತ್ತೆಯಾಗಿವೆ ಎಂದು ಡಾ. ಎಸ್.ಡಿ. ಶೆಟ್ಟಿ ತಿಳಿಸಿದ್ದಾರೆ. 15ನೇ ಶತಮಾನಕ್ಕೂ ಮೊದಲೇ ಶಿಶಿಲದಲ್ಲಿ ನಿರ್ಮಾಣವಾಗಿದ್ದ 6 ರಿಂದ 8 ಬಸದಿಗಳ ಅವಶೇಷಗಳು ಪತ್ತೆಯಾಗಿವೆ. ಆದರೆ ಪ್ರಸ್ತುತ ಶಿಶಿಲದಲ್ಲಿ ಒಂದು ಕೂಡಾ ಜೈನರ ಮನೆ ಇಲ್ಲ. ಬಸದಿಯು ₹28 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದು, ಮಾರ್ಚ್‌ 8 ರಿಂದ 12ರ ವರೆಗೆ ಪಂಚಲ್ಯಾಣ ಮಹೋತ್ಸವ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT