ಉಜಿರೆ: ಮೂಡುಬಿದಿರೆಯ ಎಸ್.ಎನ್.ಎಂ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ನಡೆದ ಅಂತರಕಾಲೇಜು ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಉಜಿರೆಯ ಎಸ್‌ಡಿಎಂ ಪಾಲಿಟೆಕ್ನಿಕ್‌ನ ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಸಂತೋಷ್ ಜೈನ್ ತಿಳಿಸಿದ್ದಾರೆ.
ಎಸ್‌ಡಿಎಂ ಪಾಲಿಟೆಕ್ನಿಕ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಬಹೂಪಯೋಗಿ ಕೃಷಿ ಟ್ರಾಲಿ ರಚನೆ ಮಾಡಿದ್ದು, ತಂಡದಲ್ಲಿ ಸುಮಂತ್ ಎಸ್.ಕೋಟೆ, ಮನ್ವಿತ್, ಅಮೀನ್‌ಅಹ್ಮದ್, ಚೇತನ್ ಎಂ., ಗುರುರಾಜ್ ಕೆ., ವಿನಯ್ ಬಿ.ಸಿ. ಭಾಗವಹಿಸಿದ್ದರು. ಅವರಿಗೆ ಶಿವರಾಜ್ ಮತ್ತು ಸಾಯಿಚರಣ್ ಮಾರ್ಗದರ್ಶನ ಮಾಡಿದ್ದರು ಎಂದರು.
ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪೇಪರ್ ಪ್ಲೈವುಡ್ ಬಹುಮಾನ ಗಳಿಸಿದ್ದು, ರೆಹಾನ್, ಸಂದೇಶ್, ಅಭಿಲಾಶ್ ಮತ್ತು ಹರ್ಷ ತಂಡದಲ್ಲಿದ್ದರು. ಅವರಿಗೆ ಪ್ರವೀಣಾ ಬಿ.ಜಿ. ಮತ್ತು ತೃಪ್ತಿ ಶೆಟ್ಟಿ ಮಾರ್ಗದರ್ಶನ ಮಾಡಿದ್ದರು.
ವಿಜೇತರಿಗೆ ₹10 ಸಾವಿರ ನಗದು, ಫಲಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.