ಭಾನುವಾರ, ಮೇ 2, 2021
27 °C

ನಟ ವಿನೋದ್ ಆಳ್ವಗೆ ಮಧ್ಯಂತರ ಜಾಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ಪರಿಶಿಷ್ಟ ಪಂಗಡದ ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಂಪ್ಯ ಠಾಣೆಗೆ ಶರಣಾದ ಚಿತ್ರನಟ ವಿನೋದ್ ಆಳ್ವ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರಿಗೆ ಮಧ್ಯಂತರ ಜಾಮೀನು ನೀಡಿದೆ.

ಪಡುವನ್ನೂರು ಗ್ರಾಮದ ಪದಡ್ಕ ನಿವಾಸಿ ಉದಯ್ ನಾಯ್ಕ ಮೇಲೆ ಹಲ್ಲೆ ನಡೆಸಿದ ಆರೋಪದಡಿ ವಿನೋದ್ ಆಳ್ವ ಸೇರಿ ಇಬ್ಬರ ವಿರುದ್ಧ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಡುಮಲೆ ನಾಗಬೆರ್ಮರ ಸಾನ್ನಿಧ್ಯಕ್ಕೆ ಹೋಗುವ ರಸ್ತೆ ಕಾಮಗಾರಿ ವೇಳೆ ಅಹವಾಲು ಹೇಳಿ
ಕೊಂಡಿದ್ದಕ್ಕೆ ಅವರು ಹಲ್ಲೆನಡೆಸಿ, ಅವಾಚ್ಯ ಪದಗಳಿಂದ ನಿಂದಿಸಿರು
ವುದಾಗಿ ಉದಯ್ ದೂರು ನೀಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.