ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುತ್ತೂರು: ವಸತಿಗೃಹದಲ್ಲಿ ತಂಗಿದ್ದ ಭಿನ್ನಕೋಮಿನ ಜೋಡಿ: ಪೊಲೀಸರಿಂದ ವಿಚಾರಣೆ

Published : 13 ಆಗಸ್ಟ್ 2024, 13:42 IST
Last Updated : 13 ಆಗಸ್ಟ್ 2024, 13:42 IST
ಫಾಲೋ ಮಾಡಿ
Comments

ಪುತ್ತೂರು: ನಗರದ ಹೊರವಲಯದ ನೆಹರೂನಗರದಲ್ಲಿರುವ ವಸತಿಗೃಹವೊಂದರಲ್ಲಿ ಮುಸ್ಲಿಂ ಸಮುದಾಯದ ಯುವಕ ಮತ್ತು ಹಿಂದೂ ಸಮುದಾಯದ ಯುತಿ ಕೊಠಡಿ ಪಡೆದು ತಂಗಿದ್ದ ಮಾಹಿತಿ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಮಂಗಳವಾರ ವಸತಿಗೃಹದ ಮುಂದೆ ಸೇರಿದ್ದರಿಂದ ಕೆಲಕಾಲ ಗೊಂದಲ ಉಂಟಾಗಿತ್ತು.

ಬೆಂಗಳೂರು ಮೂಲದವರೆನ್ನಲಾದ ಯುವಕ ಹಾಗೂ ಯುವತಿ ತಂಗಿದ್ದ ಲಾಡ್ಜ್‌ ಮುಂದೆ ಸೇರಿದ ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದರು.

ಪುತ್ತೂರು ನಗರ ಠಾಣೆ ಎಸ್ಐಗಳಾದ ಆಂಜನೇಯ ರೆಡ್ಡಿ, ಸೇಸಮ್ಮ, ಎಸ್ಐ ಕೃಷ್ಣಪ್ಪ ಅವರನ್ನೊಳಗೊಂಡ ಪೊಲೀಸ್ ತಂಡ ಲಾಡ್ಜ್‌ಗೆ ತೆರಳಿ ವಿಚಾರಣೆ ನಡೆಸಿದ್ದು, ಅವರಿಬ್ಬರೂ ಬೆಂಗಳೂರಿನಲ್ಲಿ ವಿವಾಹ ನೋಂದಣಿ ಮಾಡಿಕೊಂಡಿರುವುದು ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದೆ.

ಪುತ್ತೂರಿನಲ್ಲಿ ಜಾಗ ಖರೀಸಿದ್ದು, ಜಾಗದ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯದ ಕೆಲಸಕ್ಕಾಗಿ ಇಲ್ಲಿಗೆ ಬಂದು ತಂಗಿರುವುದಾಗಿ ಪೊಲೀಸರ ವಿಚಾರಣೆಯ ವೇಳೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಭಿನ್ನ ಕೋಮಿನ ಜೋಡಿಯ ದಾಖಲೆ ಪಡೆಯದೆ ರೂಮ್ ನೀಡಿದ್ದಾರೆ. ಈ ಲಾಡ್ಜ್‌ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಅಲ್ಲಿ ಸೇರಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT