ಮಂಗಳೂರು: ‘ಮ್ಯೂಚುವಲ್ ಫಂಡ್ಗಳಲ್ಲಿ ಜಾಸ್ತಿ ಪ್ರತಿಫಲ ಪಡೆಯಬೇಕಾದರೆ ದೀರ್ಘಾವಧಿ ಹೂಡಿಕೆಯನ್ನು ಆಯ್ಕೆ ಮಾಡುವುದು ಉತ್ತಮ. ದೇಶದಲ್ಲಿರುವ ಸದ್ಯದ ಪರಿಸ್ಥಿತಿಯಲ್ಲಿ ಈಕ್ವಿಟಿ ಮೇಲೆ ದೀರ್ಘಾವಧಿ ಹೂಡಿಕೆ ಮಾಡುವುದು ಉತ್ತಮ’ ಎಂದು ಹಣಕಾಸು ಯೋಜನೆಯ ಸಲಹೆಗಾರ ಕೆ.ಆರ್.ವಿಶ್ವನಾಥ ಕೊನಾರೆ ಸಲಹೆ ನೀಡಿದರು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’, ಭಾರತೀಯ ಮ್ಯೂಚುವಲ್ ಫಂಡ್ಸ್ ಅಸೋಸಿಯೇಷನ್ (ಎಎಂಎಫ್ಐ) ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಹೂಡಿಕೆಗಳು ಮತ್ತು ನೀವು’ ಹೂಡಿಕೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮ್ಯೂಚುವಲ್ ಫಂಡ್ಗಳ ಮೇಲಿನ ಹೂಡಿಕೆಯ ಮಹತ್ವವನ್ನು ವಿವರಿಸಿದರು.

ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಲು ಇರುವ ಹೇರಳ ಆಯ್ಕೆಗಳು, ಹೂಡಿಕೆಯ ವೇಳೆ ಪ್ರದರ್ಶಿಸುವ ಜಾಣ್ಮೆ ಹಾಗೂ ಮಾರುಕಟ್ಟೆಯ ಬೆಳವಣಿಗೆಗಳ ಕುರಿತ ತಿಳಿವಳಿಕೆಯು ಹೇಗೆ ಹೆಚ್ಚಿನ ವರಮಾನ ತಂದುಕೊಡಬಹುದು ಎಂಬುದನ್ನು ಅವರು ವಿಶ್ಲೇಷಿಸಿದರು.

‘ಯಾವ ಉದ್ದೇಶಕ್ಕೆ ಹೂಡಿಕೆ ಮಾಡುತ್ತಿದ್ದೇವೆ, ಯಾವಾಗ ಹೂಡಿಕೆ ಮಾಡುತ್ತಿದ್ದೇವೆ ಮತ್ತು ಇದಕ್ಕೆ ಯಾವ ವಿಧಾನವನ್ನು ಅನುಸರಿಸಬೇಕು ಎಂಬ ಬಗ್ಗೆ ಹೂಡಿಕೆದಾರರಿಗೆ ಖಚಿತತೆ ಇರಬೇಕು. ಹೂಡಿಕೆಯಲ್ಲಿ ಶಿಸ್ತು ಪಾಲಿಸಬೇಕು. ಹೂಡಿಕೆಯಿಂದ ನಿರೀಕ್ಷಿತ ಪ್ರತಿಫಲ ಪಡೆಯಲು ಇದು ಬಲುಮುಖ್ಯ’ ಎಂದರು.

‘ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವಾಗ ಬೇರೆ ಬೇರೆ ಅಸೆಟ್ ಕ್ಲಾಸ್ಗಳನ್ನು ಆಯ್ಕೆ ಮಾಡಿಕೊಳ್ಳುವುದು ಸುರಕ್ಷಿತ ವಿಧಾನ. ಹೂಡಿಕೆಗೆ ಪ್ರತಿಫಲ ಜಾಸ್ತಿ ಸಿಗಬೇಕಾದರೆ ಹೆಚ್ಚು ಅಪಾಯವಿರುವ ಫಂಡ್ಗಳಿಗೂ ದೀರ್ಘಾವಧಿ ಹೂಡಿಕೆ ಮಾಡಬಹುದು. ಭಾರತವು ₹ 338 ಲಕ್ಷ ಕೋಟಿ (4 ಟ್ರಿಲಿಯನ್ ಡಾಲರ್) ಆರ್ಥಿಕತೆಯಿಂದ ₹ 846 ಲಕ್ಷ ಕೋಟಿ ( 10 ಟ್ರಿಲಿಯನ್ ಡಾಲರ್) ಆರ್ಥಿಕತೆಯಾಗುವತ್ತ ಹೆಜ್ಜೆಹಾಕುತ್ತಿದ್ದು, ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಗಾತ್ರ ಹೆಚ್ಚಾಗಲಿದೆ. ಹಾಗಾಗಿ ಈಕ್ವಿಟಿ ಮೇಲಿನ ಹೂಡಿಕೆಯಿಂದ ಪ್ರತಿಫಲ ಪಡೆಯುವ ಅವಕಾಶಗಳು ಜಾಸ್ತಿ’ ಎಂದರು.

‘ಉಳಿತಾಯದ ಮೊತ್ತವನ್ನು ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಿದರೆ ಹಣದುಬ್ಬರ ಮೀರಿ ಲಾಭ ಗಳಿಸಬಹುದು. ಹೂಡಿಕೆಗೆ ನಿರ್ದಿಷ್ಟ ಯೋಜನೆಯನ್ನು ಆಯ್ಕೆ ಮಾಡುವ ಮುನ್ನ ಅದರಿಂದ ಎದುರಾಗಬಹುದಾದ ಅಪಾಯಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ಇದು ನಷ್ಟ ಅನುಭವಿಸುವ ಸಾಧ್ಯತೆಯನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ರೆಗ್ಯುಲರ್ ಹೂಡಿಕೆ ( ತಜ್ಞರ ನೆರವಿನೊಂದಿಗೆ) ಹಾಗೂ ನೇರ ಹೂಡಿಕೆಯ ಆಯ್ಕೆಗಳಿವೆ. ಆರ್ಥಿಕ ಸಾಕ್ಷರತೆ ಇಲ್ಲದವರು ತಜ್ಞರ ನೆರವು ಪಡೆದು ಹೂಡಿಕೆ ಮಾಡುವುದು ಒಳ್ಳೆಯದು’ ಎಂದರು.

‘ಯಾವುದೇ ಸಮಯದಲ್ಲಿ ಬೇಕಾದರೂ ಹೂಡಿಕೆ ಆರಂಭಿಸಬಹುದು. ಕನಿಷ್ಠ ₹ 500ರಿಂದ ಗರಿಷ್ಠ ಎಷ್ಟು ಮೊತ್ತವನ್ನು ಬೇಕಾದರೂ ಹೂಡಿಕೆ ಮಾಡಬಹುದು. ಹೂಡಿಕೆಯ ಹಣವನ್ನು ಯಾವಾಗ ಬೇಕಾದರೂ ಹಿಂಪಡೆಯಬಹುದು. ಹೂಡಿಕೆಯಿಂದ ಬರುವ ₹ 1.5 ಲಕ್ಷದವರೆಗಿನ ಲಾಭಕ್ಕೆ ತೆರಿಗೆ ವಿನಾಯಿತಿ ಇದೆ. ಅದಕ್ಕಿಂತ ಹೆಚ್ಚು ಲಾಭ ಬಂದರೆ ದೀರ್ಘಾವಧಿ ಹೂಡಿಕೆಗೆ ಶೇ 12.5ರಷ್ಟು ಹಾಗೂ ಅಲ್ಪಾವಧಿ ಹೂಡಿಕೆಗೆ ಶೇ 20ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ’ ಎಂದು ಅವರು ವಿವರಿಸಿದರು.

‘ಯಾವತ್ತೂ ಒಂದೇ ಆದಾಯದ ಮೂಲವನ್ನು ನೆಚ್ಚಿಕೊಳ್ಳಬಾರದು. ಮತ್ತೊಂದು ಆದಾಯದ ಮೂಲವನ್ನು ಕಂಡುಕೊಳ್ಳಲು ನಮ್ಮ ಗಳಿಕೆಯ ಒಂದು ಭಾಗವನ್ನು ಹೂಡಿಕೆ ಮಾಡುವುದು ಸರಿಯಾದ ಮಾರ್ಗ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.