ಜೋಡುಪಾಲ ನಿರಾಶ್ರಿತರಿಗೆ ಕೇಂದ್ರದ ಪರಿಹಾರ: ಸಚಿವ ಸದಾನಂದ ಗೌಡ 

7

ಜೋಡುಪಾಲ ನಿರಾಶ್ರಿತರಿಗೆ ಕೇಂದ್ರದ ಪರಿಹಾರ: ಸಚಿವ ಸದಾನಂದ ಗೌಡ 

Published:
Updated:
Deccan Herald

ಸುಳ್ಯ: ಜೋಡುಪಾಲ ಭೂಕುಸಿತ ನಿರಾಶ್ರಿತರಿಗೆ ರಾಜ್ಯ ಸರ್ಕಾರದಿಂದ ವರದಿ ತರಿಸಿಕೊಂಡು ಕೇಂದ್ರದ ಪರಿಹಾರದ ಹಂತಗಳನ್ನು ಪ್ರಕಟಿಸಲಾಗುತ್ತದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

 ಜೋಡುಪಾಲ ಭೂಕುಸಿತ ನಿರಾಶ್ರಿತರ ಕೇಂದ್ರಗಳಿಗೆ ಭಾನುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಮನೆ ಇಲ್ಲದವರಿಗೆ ಕೇಂದ್ರದಿಂದ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಮನೆ ಕೊಡಲಾಗುವುದು. ಮುಖ್ಯಮಂತ್ರಿ ಜತೆ ಮಾತನಾಡಿದ್ದೇನೆ. ಪರಿಹಾರದ ಭರವಸೆ ನೀಡಿದ್ದೇವೆ. ಅಗತ್ಯತೆ ಹಾಗೂ ರಾಜ್ಯ ನೀಡುವ ವರದಿಯ ಆಧಾರದಲ್ಲಿ ನೀಡಲು ಕೇಂದ್ರ ಬದ್ಧವಾಗಿದೆ’ ಎಂದು ಸದಾನಂದ ಗೌಡ ವಿವರಿಸಿದರು.

ರಸ್ತೆಗೆ ಅನುದಾನ: ‘ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿದೆ. ರಸ್ತೆಗೂ ಅನುದಾನವನ್ನು ಕೇಂದ್ರದಿಂದ ನೀಡಬಹುದು’ ಎಂದು ಸಚಿವ ಹೇಳಿದ ಸಚಿವರು, ನಿರಾಶ್ರಿತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಆಹಾರ, ಆರೋಗ್ಯ ಕಾಳ ಇರಲಿ:   ‘ಜನರು ಬೇರೆ ಬೇರೆ ಕಡೆಯಿಂದ ಬರುತ್ತಿದ್ದಾರೆ. ಅಲ್ಲದೆ ಬೇರೆ ಬೇರೆ ಬ್ರಾಂಡ್ ಅಕ್ಕಿಗಳನ್ನು ಉಪಯೋಗಿಸುವುದರಿಂದಲೂ ಆರೋಗ್ಯದ ಸಮಸ್ಯೆ ಕಾಣಿಸಿಕೊಳ್ಳಬಹುದು. ಎಲ್ಲಾ ನಿರಾಶ್ರಿತರನ್ನು ಪ್ರತಿ ದಿನವೂ ತಪಾಸಣೆ ನಡೆಸಿ’ ಎಂದು ಸಚಿವ ಡಿ.ವಿ.ಸದಾನಂದ ಗೌಡ ಅವರು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

ಕೇಂದ್ರ ಸಚಿವರೊಂದಿಗೆ ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕ ಅಂಗಾರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !