ಸಂತ್ರಸ್ತರ ಅಗತ್ಯ ಪೂರೈಸಲು ಬದ್ದ-ಸಚಿವ

7
ಜೋಡುಪಾಲಕ್ಕೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಭೇಟಿ

ಸಂತ್ರಸ್ತರ ಅಗತ್ಯ ಪೂರೈಸಲು ಬದ್ದ-ಸಚಿವ

Published:
Updated:
Deccan Herald

ಸುಳ್ಯ: ‘ಮಡಿಕೇರಿಯ ಜೋಡುಪಾಲದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಸಮೀಕ್ಷೆ ನಡೆಸಿ ಮನೆ, ಇತರ ಅವಶ್ಯಕತೆಗಳನ್ನು ಪೂರೈಸಲು ಸರ್ಕಾರ ಬದ್ಧವಾಗಿದೆ’ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಭರವಸೆ ನೀಡಿದರು.

ಜೋಡುಪಾಲ ಭೂಕುಸಿತ ಪ್ರದೇಶ ಮತ್ತು ನಿರಾಶ್ರಿತರ ಕೇಂದ್ರಗಳಿಗೆ  ಭಾನುವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಈ ಭಾಗದಿಂದ ಸುಮಾರು 2700 ಮಂದಿಯನ್ನು ವಿವಿಧ ಕೇಂದ್ರಗಳಿಗೆ ಕಳುಹಿಸಲಾಗಿದೆ. ಕೊಡಗು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 30 ನಿರಾಶ್ರಿತ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲಿ ನಿರಾಶ್ರಿತರಿಗೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನು  ಅಧಿಕಾರಿಗಳನ್ನು ಮತ್ತು ಸಂಘ ಸಂಸ್ಥೆಯವರ ಸಹಕಾರದಿಂದ ಮಾಡಲಾಗಿದೆ. ಆರೋಗ್ಯ ಸೇವೆಗೆ ವ್ಯವಸ್ಥೆ ಮಾಡಲಾಗಿದೆ. ಜನರು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ’ ಎಂದು ಹೇಳಿದರು.

‘ ಮನೆ ಕಳಕೊಂಡವರು, ಜಾಗ ಕಳಕೊಂಡವರು ಹೀಗೆ ನಾನಾ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಅವರ ಪರಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ’ ಎಂದರು.

ಎಲ್ಲಾ ಚೆನ್ನಾಗಿದೆಯೇ?: ಸಂಪಾಜೆ ಗಂಜಿಕೇಂದ್ರದಲ್ಲಿ ಸಂತ್ರಸ್ತರನ್ನು ಸಚಿವ ದೇಶಪಾಂಡೆ ಮಾತನಾಡಿಸಿ, ‘ಇಲ್ಲಿ ಎಲ್ಲಾ ವ್ಯವಸ್ಥೆ ಚೆನ್ನಾಗಿದೆಯೇ?, ಏನಾದರೂ ಸಮಸ್ಯೆ ಇದೆಯೇ? ಇದ್ದರೆ ನಮ್ಮ ಅಧಿಕಾರಿ, ಸಿಬ್ಬಂದಿ,  ಸ್ವಯಂ ಸೇವಾ ಕಾರ್ಯಕರ್ತರ ಗಮನಕ್ಕೆ ತನ್ನಿ. ಎಲ್ಲಾ ವ್ಯವಸ್ಥೆ ಒದಗಿಸಲು ನಾವೆಲ್ಲಾ ಸಿದ್ದರಿದ್ದೇವೆ’ ಎಂದು ಭರವಸೆ ನೀಡಿದರು.

ಪೆಟ್ಟಿಗೆ ಕೊಡಿ: ‌ಸಂತ್ರಸ್ತೆ ಅಕ್ಕಮ್ಮ ಅವರು ಸಚಿವರಲ್ಲಿ , ‘ ನಮ್ಮ ಬಟ್ಟೆ ಇಟ್ಟುಕೊಳ್ಳಲು ಪೆಟ್ಟಿಗೆ ಏಬೇಕಿತ್ತು ಎಂದು ಕೇಳಿಕೊಂಡಾಗ, ಸಚಿವರು ತಕ್ಷಣ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಅವರಿಗೆ ಸೂಚಿಸಿದರು. ‘ ಸಂಜೆಯೊಳಗಾಗಿ ಟ್ರಂಕ್  ನೀಡುತ್ತೇವೆ’ ಎಂದು ಅವರು ಹೇಳಿದರು.

ನಮ್ಮ ಮನೆ ಹೇಗಿದೆ?: ನಿರಾಶ್ರಿತ ರಾಮಣ್ಣ ಎನ್ನುವವರು‘ ನಾವು ಇದ್ದ ಜಾಗ ಈಗ ಹೇಗಿದೆ’ ಎಂದು ಸಚಿವರಲ್ಲಿ ಪ್ರಶ್ನಿಸಿದಾಗ ‘ನಾವು ಆದಷ್ಟು ಸಮಧಾನದಿಂದ ಇರೋಣ’ ಎಂದು ವಿವರಿಸಿದರು.

₹10 ಲಕ್ಷ ವಿತರಣೆ: ಆರೋಗ್ಯ ಇಲಾಖಾ ನೌಕರ ಬಸಪ್ಪ ಮತ್ತು ಅವರ ಮಗಳು ಮನೆ ಕುಸಿತದಿಂದ ಮೃತಪಟ್ಟಿದ್ದು, ಕುಟಂಬಕ್ಕೆ ಸಚಿವರು ತಲಾ ₹5 ಲಕ್ಷದಂತೆ ಇಬ್ಬರಿಗೆ ₹ 10ಲಕ್ಷ  ಮೊತ್ತದ ಚೆಕ್ ಹಸ್ತಾಂತರಿಸಿದರು.

ಸಚಿವ ಯು.ಟಿ.ಖಾದರ್, ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜ, ಹರೀಶ್‌ಕುಮಾರ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !