ಕಡಬ(ಉಪ್ಪಿನಂಗಡಿ): ತಾಲ್ಲೂಕು ಮಟ್ಟದಲ್ಲಿ ನ್ಯಾಯಾಲಯಗಳನ್ನು ಪ್ರಾರಂಭಿಸಿ ಶೀಘ್ರ ನ್ಯಾಯದಾನ ನೀಡಬೇಕು ಎನ್ನುವುದು ನ್ಯಾಯಾಂಗ ವ್ಯವಸ್ಥೆಯ ಆಶಯವಾಗಿದೆ. ಈ ನಿಟ್ಟಿನಲ್ಲಿ ಕಕ್ಷಿದಾರರಿಗೆ ಶೀಘ್ರ ನ್ಯಾಯದಾನವಾಗಲು ಎಲ್ಲಾ ವಕೀಲರು ಹಾಗೂ ನ್ಯಾಯಾಧೀಶರು ಶ್ರಮಿಸುಬೇಕಾಗಿದೆ ಎಂದು ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಹೇಳಿದರು.

ಕಡಬದ ಖಾಸಗಿ ಕಟ್ಟಡದಲ್ಲಿ ಮಂಗಳವಾರ ಆರಂಭವಾದ ಪುತ್ತೂರು ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಕಡಬ ಸಂಚಾರಿ ನ್ಯಾಯಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶವಾದ ಕಡಬದಿಂದ ಪುತ್ತೂರು ಹಾಗೂ ಸುಳ್ಯ ನ್ಯಾಯಾಲಯಗಳಿಗೆ 40 ರಿಂದ 45 ಕಿ.ಮೀ. ದೂರ ಇರುವುದರಿಂದ ಕಕ್ಷಿದಾರರಿಗೆ ಹಾಗೂ ವಕೀಲರಿಗೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡು ಹಾಗೂ ಇಲ್ಲಿಯವರ ಬೇಡಿಕೆಗೆ ಅನುಸಾರ ಕಡಬದಲ್ಲಿ ನ್ಯಾಯಾಲಯವನ್ನು ಆರಂಭಿಸಲಾಗಿದೆ. ಆರಂಭದಲ್ಲಿ ತಾತ್ಕಾಲಿಕವಾಗಿ ವಾರದಲ್ಲಿ ಎರಡು ದಿನ ನ್ಯಾಯಾಲಯ ಕಲಾಪಗಳು ನಡೆಯಲಿದೆ ಎಂದರು.

ಕಡಬ ತಾಲ್ಲೂಕಿಗೆ ಸಂಬಂಧಪಟ್ಟ ಸುಮಾರು 1,200 ಪ್ರಕರಣಗಳ ಪೈಕಿ ಕೆಲವನ್ನು ಕಡಬ ನ್ಯಾಯಾಲಯಕ್ಕೆ ವರ್ಗಾಯಿಸಲಾಗುವುದು. ಇದರಿಂದ ಜನ ಸಾಮಾನ್ಯರಿಗೆ ಅನುಕೂಲವಾಗುತ್ತದೆ. ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಕಡಬ ವಿಧಾನಸೌಧದ ಬಳಿ 3 ಎಕರೆ ಜಮೀನನ್ನು ಕಾಯ್ದಿರಿಸಲಾಗಿದ್ದು, ಮುಂದೆ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.

ಪುತ್ತೂರು ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ಶ್ವೇತಾ ಜೆ. ಮಾತನಾಡಿದರು.

ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಮಾತನಾಡಿ, ಕಡಬದಲ್ಲಿ ನ್ಯಾಯಾಲಯ ಸ್ಥಾಪನೆಯಾಗಿರುವುದು ಸಂತಸದ ವಿಚಾರ. ಇದಕ್ಕೆ ಹಲವರ ಶ್ರಮವಿದೆ. ಸ್ವಲ್ಪ ಸಮಯ ಕಾಗದ ಪತ್ರಗಳ ವಿಚಾರಗಳಲ್ಲಿ ವಕೀಲರು ಜಾಸ್ತಿ ಶ್ರಮ ವಹಿಸಬೇಕಾಗಬಹುದು ಇದಕ್ಕೆ ಪುತ್ತೂರು ವಕೀಲರ ಸಹಕಾರವೂ ಇದೆ ಎಂದು ಹೇಳಿದರು.

ಸುಳ್ಯ ವಕೀಲರ ಸಂಘದ ಅಧ್ಯಕ್ಷ ಸುಕುಮಾರ ಕೊಡ್ತುಗುಳಿ ಮಾತನಾಡಿದರು. ಉದ್ಯಮಿ ಸುಂದರ ಗೌಡಮಂಡೆಕರ, ಲೋಕೋಪಯೋಗಿ ಇಲಾಖಾ ಎಂಜಿನಿಯರ್ ಪ್ರಮೋದ್ ಕುಮಾರ್, ಸರ್ಕಾರಿ ಅಭಿಯೋಜಕಿ ಕವಿತಾ, ಹಿರಿಯ ವಕೀಲರಾದ ಶೀನಪ್ಪಗೌಡ ಬೈತಡ್ಕ, ವೆಂಕಪ್ಪ ಗೌಡ ಮಾಚಿಲ, ದುರ್ಗಾಪ್ರಸಾದ್ ರೈ ಕುಂಬ್ರ, ಭಾಸ್ಕರ ಗೌಡ ಕೋಡಿಂಬಾಳ, ಜಗದೀಶ್ ಹುದೇರಿ, ಅರಂತಡ್ಕ ಬಾಲಕೃಷ್ಣ ರೈ, ಕಡಬ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜಂಬುರಾಜ್ ಮಹಾಜನ್, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಪಿ. ವರ್ಗೀಸ್, ಕಡಬ ಉಪತಹಶೀಲ್ದಾರ್ ಗೋಪಾಲ್ ಹಾಜರಿದ್ದರು. ಸಭಾ ಕಾರ್ಯಕ್ರಮದ ಬಳಿಕ ನ್ಯಾಯಾಲಯದ ಪ್ರಥಮ ಕಲಾಪ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-29-290113547

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.