ಕಡಬ-ದೇರಾಜೆ: ಗುಡ್ಡ ಕುಸಿದು ಅಪಾರ ನಷ್ಟ

7

ಕಡಬ-ದೇರಾಜೆ: ಗುಡ್ಡ ಕುಸಿದು ಅಪಾರ ನಷ್ಟ

Published:
Updated:
Deccan Herald

ಕಡಬ(ಉಪ್ಪಿನಂಗಡಿ):  ನಿರಂತರವಾಗಿ ಸುರಿದ ಮಳೆ ಪರಿಣಾಮ ಕಡಬ ಸಮೀಪದ ಬಲ್ಯ ಗ್ರಾಮದ ದೇರಾಜೆ ಎಂಬಲ್ಲಿ ಗುಡ್ಡ ಕುಸಿದು ಈ ಭಾಗದ ಹಲವಾರು ಕೃಷಿಕರ ತೋಟಗಳಿಗೆ ಹಾನಿಯಾಗಿದೆ.

 ಮನೆಯೊಂದು ಅಪಾಯ ಸ್ಥಿತಿಯಲ್ಲಿದೆ. ಗುಡ್ಡ ಕುಸಿತದಿಂದ ಮಣ್ಣು ತೋಡೊಂದಕ್ಕೆ ಬಿದ್ದು ನೀರು ಹರಿಯಲು ತೋಡಕಾದ ಕಾರಣ ಡೊಂಬಯ್ಯ ಗೌಡ ಎಂಬವರ ಕೃಷಿ ತೋಟದಲ್ಲಿ ಮಳೆ ನೀರು ಹರಿದು ಹಲವಾರು ಅಡಿಕೆ, ತೆಂಗು, ರಬ್ಬರ್ ನೀರಿನಲ್ಲಿ ಕೊಚ್ಚಿ ಹೋಗಿದೆ. ಅಲ್ಲದೆ ಅವರ ಮನೆಯೂ ಅಪಾಯ ಸ್ಥಿತಿಯಲ್ಲಿದೆ. ₹1 ಲಕ್ಷ  ಮಿಕ್ಕಿ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.

ಬಲ್ಯ ಗ್ರಾಮದ ಲಕ್ಷ್ಮೀ ದೇರಾಜೆ, ಸದಾಶಿವ, ವೆಂಕಟರಮಣ, ದೇವಿ ಕುಮಾರಿ ಇವರುಗಳ ತೋಟದಲ್ಲಿ ತೋಡಿನ ನೀರು ಹರಿಯುತ್ತಿದ್ದು ಅಪಾರ ಪ್ರಮಾಣದಲ್ಲಿ ಅಡಿಕೆ, ತೆಂಗು, ರಬ್ಬರ್ ಗಿಡಗಳು ಮುಳುಗಡೆಯಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !