ಕಡಬ (ಉಪ್ಪಿನಂಗಡಿ): ಬಿಸಿಲಿನ ತಾಪಕ್ಕೆ ಕಡಬ ತಾಲ್ಲೂಕು ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕುಮಾರಧಾರಾ ಮತ್ತು ಗುಂಡ್ಯ ಹೊಳೆಯಲ್ಲಿ ನೀರಿನ ಒಳ ಹರಿವು ಕಡಿಮೆಯಾಗುತ್ತಿದ್ದು, ಕಡಬ ಪೇಟೆಗೆ ಹೊಂದಿಕೊಂಡಿರುವ ಹೊಸಕೆರೆ ಹಾಗೂ ಅಮೃತ ಸರೋವರದಲ್ಲಿ ನೀರು ಆವಿಯಾಗುತ್ತಿದೆ.

ನೂರಾರು ವರ್ಷಗಳ ಇತಿಹಾಸದ ಈ ಕೆರೆಗಳು ಸುತ್ತಮುತ್ತಲಿನ ನೂರಾರು ಎಕರೆ ಭೂಮಿಯ ಅಂತರ್ಜಜಲವನ್ನು ಕಾಯ್ದುಕೊಂಡು ಬರುತ್ತಿದ್ದವು. ಆದರೆ, ಈ ವರ್ಷ ಹೊಸಕೆರೆಯಲ್ಲಿ ನೀರು ಬತ್ತಿಹೋಗಿದೆ. ಇದೇ ಕೆರೆಯ ಇನ್ನೊಂದು ಮಗ್ಗಲಲ್ಲಿರುವ ಅಮೃತ ಸರೋವರದ ತಳವೂ ಕಾಣುತ್ತಿದೆ.

ತಾಲ್ಲೂಕಿನ ಕೆರೆಗಳಲ್ಲಿ ಅತಿ ದೊಡ್ಡ ಕೆರೆ ಇದಾಗಿದ್ದು, ಸುಮಾರು 100 ಮೀಟರ್ ಉದ್ದ ಹಾಗೂ 200 ಮೀಟರ್ ಅಗಲವಿದೆ. ಕುಟ್ರುಪ್ಪಾಡಿ ಗ್ರಾಮದ ಹಳೆ ಸ್ಟೇಷನ್ ಬಳಿ ಸುಮಾರು 7 ಎಕರೆಯಲ್ಲಿರುವ ಹೊಸಕೆರೆಯನ್ನು ಈ ಹಿಂದೆ ಜಿಲ್ಲಾ ಪಂಚಾಯಿತಿಯಿಂದ ಅಭಿವೃದ್ಧಿಪಡಿಸಲಾಗಿತ್ತು. ಅಲ್ಲಿಂದ ಇದುವರೆಗೆ ಸಮೃದ್ಧ ನೀರು ಸಂಗ್ರಹವಾಗುತ್ತಿತ್ತು.

ಪೊಟ್ಟುಕೆರೆ ಅಮೃತ ಸರೋವರ ಆಗಿದ್ದು: ಹೊಸಕೆರೆಗೆ ಹೊಂದಿಕೊಂಡಿರುವ ಅಮೃತ ಸರೋವರ ಕೆರೆಗೆ ಈ ಹಿಂದೆ ಪೊಟ್ಟುಕೆರೆ ಎಂದು ಹೆಸರಿತ್ತು. ಕಡಬ ಸಮೀಪದ ಹಳೆ ಸ್ಟೇಷನ್ನಲ್ಲಿರುವ ಪೊಟ್ಟುಕರೆಯನ್ನು ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಿ ಅಮೃತ ಸರೋವರ ಎಂದು ನಾಮಕರಣ ಮಾಡಲಾಗಿತ್ತು. 2023ರಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಯ ‘ನಮ್ಮೂರು ನಮ್ಮ ಕೆರೆ’ ಯೋಜನೆ ಯಡಿ ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಪಾಲುದಾರಿಕೆಯಲ್ಲಿ ಸುಮಾರು ₹ 15 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಕೆರೆ ಅಭಿವೃದ್ಧಿಯ ಬಳಿಕ ಕೆರೆಯ ಕೆಳಗಿನ ಭಾಗ, ಕೆರೆ ಸುತ್ತ ಅಂತರ್ಜಲ ಹೆಚ್ಚಾಗಿತ್ತು.

ಮೀನುಗಳು ನಾಶವಾಗುತ್ತಿವೆ: ಕೆರೆಯಲ್ಲಿ ಹಲವು ಜಾತಿ ಮೀನುಗಳಿದ್ದು, ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಅಧೀನದ ಈ ಕೆರೆಯಲ್ಲಿ ಪಿಲೋಸಿಯ ಜಾತಿಯ ಮೀನುಗಳನ್ನು ಪಂಚಾಯಿತಿ ವತಿಯಿಂದ ಸಾಕಾಣೆ ಮಾಡಲಾಗುತ್ತಿದೆ. ಈಚೆಗೆ ಸುಮಾರು 18 ಸಾವಿರ ಮೀನು ಮರಿಗಳನ್ನು ಕೆರೆಗೆ ಬಿಡಲಾಗಿತ್ತು. ಆದರೆ, ಕೆರೆಯಲ್ಲಿ ನೀರು ತಳಹಿಡಿದು ಕೆಲವು ಮೀನುಗಳು ಮೃತಪಟ್ಟಿವೆ. ಬದುಕಿರುವ ಮೀನುಗಳು ಪಕ್ಷಿಗಳಿಗೆ ಆಹಾರವಾಗುತ್ತಿವೆ.

ಅಭಿವೃದ್ಧಿ ಪಡಿಸುವ ಬಗ್ಗೆ ಸರ್ಕಾರಕ್ಕೆ ಪತ್ರ: ಪೊಟ್ಟುಕೆರೆ, ಹೊಸಕೆರೆಯಲ್ಲಿ ನೀರು ಬರಿದಾಗುದೆ. ಹೂಳೆತ್ತಿ ಅಭಿವೃದ್ಧಿಪಡಿಸುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಭವಿಷ್ಯದಲ್ಲಿ ಕೆರೆಯಲ್ಲಿ ನೀರನ್ನು ಉಳಿಸಿಕೊಳ್ಳುವ ಸಂಬಂಧ ಹೆಚ್ಚುವರಿ ನೀರು ಹರಿದು ಹೋಗುವ ಘಟಕವನ್ನು ಎತ್ತರಿಸಲಾಗುತ್ತಿದೆ ಎಂದು ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಪಿಡಿಒ ಆನಂದ ಗೌಡ ಪಿಜಕಳ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-29-2039351951

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.