ಆ.14ಕ್ಕೆ ಕಡಬದಲ್ಲಿ ಪ್ರತಿಭಟನೆ

7
ಕಸ್ತೂರಿ ರಂಗನ್‌ ವರದಿ, ಗಾಡ್ಗೀಲ್ ವರದಿ, ವನ್ಯಧಾಮ, ಆನೆ ಕಾರಿಡಾರ್

ಆ.14ಕ್ಕೆ ಕಡಬದಲ್ಲಿ ಪ್ರತಿಭಟನೆ

Published:
Updated:

ಕಡಬ(ಉಪ್ಪಿನಂಗಡಿ): ಕಸ್ತೂರಿ ರಂಗನ್‌ ವರದಿ, ಗಾಡ್ಗೀಲ್ ವರದಿ, ವೈಡ್ ಲೈಫ್, ಪುಷ್ಪಗಿರಿ ವನ್ಯಧಾಮ ಮತ್ತು ಆನೆ ಕಾರಿಡಾರ್ ಯೋಜನೆಗಳ ಅನುಷ್ಠಾನ ವಿರುದ್ಧ ಇದೇ 14ರಂದು ಕಡಬ ತಾಲ್ಲೂಕು ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು  ಹೋರಾಟ ಸಮಿತಿ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ತಿಳಿಸಿದ್ದಾರೆ.

ಕಡಬ ತಾಲ್ಲೂಕಿಗೆ ಒಳಪಟ್ಟ ಬಲ್ಯ, ಕೌಕ್ರಾಡಿ, ಶಿರಾಡಿ, ಶಿಬಾಜೆ, ಕೊಂಬಾರು, ಬಿಳಿನೆಲೆ, ಸುಬ್ರಮಣ್ಯ, ಐನೆಕಿದು, ಹರಿಹರ, ಕೊಲ್ಲಮೊಗ್ರು, ಏನೆಕಲ್, ಬಳ್ಪ, ಕೂತ್ಕುಂಜ ಮೊದಲಾದ ಗ್ರಾಮಗಳನ್ನು ಕಸ್ತೂರಿರಂಗನ್ ವರದಿಯಲ್ಲಿ ಸೇರಿಸಲಾಗಿದೆ.

ಗಾಡ್ಗೀಲ್ ವರದಿ ಕೂಡ ನೋಟಿಫಿಕೇಶನ್ ಆಗಿದೆ, ಯೋಜನೆಗಳು ಅನುಷ್ಠಾನವಾದರೆ ಈ ಭಾಗದ ಸಾವಿರಾರು ಕುಟುಂಬಗಳ ಬದುಕು ಬೀದಿ ಪಾಲಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಪುಷ್ಪಗಿರಿ ವನ್ಯಧಾಮ ಕೂಡ ಫೈನಲ್ ನೊಟಿಫಿಕೇಶನ್ ಆಗಿದ್ದು ಇದರಿಂದ ರಾಜ್ಯದ ಚಾಮರಾಜನಗರ ಜಿಲ್ಲೆಯಿಂದ ಹಿಡಿದು ಬೆಳಗಾವಿ ವರೆಗೆ ಸುಮಾರು 58 ತಾಲ್ಲೂಕುಗಳಲ್ಲಿ ಪಶ್ಚಿಮ ಘಟ್ಟದ ಅಕ್ಕ-ಪಕ್ಕದಲ್ಲಿರುವ ಲಕ್ಷಾಂತರ ರೈತ ಕುಟುಂಬಗಳು ಬೀದಿ ಪಾಲಾಗುವಂತಹ ಪರಿಸ್ಥಿತಿ ಬಂದಿರುತ್ತದೆ ಈ ಬಗ್ಗೆ ಹಲವಾರು ಮನವಿ, ಧರಣಿ ಮುಷ್ಕರಗಳನ್ನು ಮಾಡಿದಾಗ ಸರ್ಕಾರ ಆಶ್ವಾಸನೆ ನೀಡಿರುವುದನ್ನು ಬಿಟ್ಟರೆ, ರೈತರಿಗೆ ಪೂರಕವಾಗಿ ಸ್ಪಂದಿಸಿರುವುದಿಲ್ಲ.

‘ಆಗಸ್ಟ್ 24ರ ಒಳಗೆ ಸುಪ್ರಿಂಕೋರ್ಟಿಗೆ ಆಕ್ಷೇಪಣೆ ಸಲ್ಲಿಸದೇ ಇದ್ದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಮಾಡುವಂತೆ ಕೋರ್ಟ್ ಸೂಚಿಸಿದ ಬಗ್ಗೆ ಪತ್ರಿಕೆಗಳಲ್ಲಿ  ವರದಿಯಾಗಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ನ್ಯಾಯಾಲಯಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಸಬೇಕಾಗಿದೆ’ ಎಂದರು.

ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಕಡಬ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಿ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮೀರಾ ಸಾಹೇಬ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !