ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ: ಜ್ಞಾನ ಪಡೆಯುವ ಮಾಧ್ಯಮ

ಕಡಬ ತಾಲ್ಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಣರಾಜ ಕುಂಬ್ಳೆ
Last Updated 21 ನವೆಂಬರ್ 2022, 5:48 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಪ್ರಪಂಚ ಜ್ಞಾನ ಪಡೆಯುವ ಪ್ರಮುಖ ಮಾಧ್ಯಮವೇ ಭಾಷೆ ಎಂದು ಸಮ್ಮೇಳನಾಧ್ಯಕ್ಷ ಗಣರಾಜ ಕುಂಬ್ಳೆ ರಾಮಕುಂಜ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಡಬ ತಾಲ್ಲೂಕು ಘಟಕದ ವತಿಯಿಂದ ಬಿಳಿನೆಲೆ ಗೋಪಾಲಕೃಷ್ಣ ಪೌಢಶಾಲೆಯ ಪಟೇಲ್ ನಾಗಣ್ಣ ಗೌಡ ಸಭಾಂಗಣದ ಆರ್.ಎನ್.ಭಿಡೆ ವೇದಿಕೆಯಲ್ಲಿ ನಡೆದ ಕಡಬ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಅವರು ಮಾತನಾಡಿದರು.

ಭಾಷೆ ಒಂದು ಸಮುದಾಯದ ಆಸ್ತಿ. ಭಾಷೆ ಹುಟ್ಟಿನಿಂದ ಬರುವಂತಹದಲ್ಲ. ಕಲಿತೇ ಬರಬೇಕಷ್ಟೇ. ಕನ್ನಡವನ್ನು ಆಡಿ, ಓದಿ, ಬರೆದು ಬಳಸಿದರೆ ಮಾತ್ರ ಅದು ಉಳಿದೀತು. ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಬೆಳೆಸಲು ಪೋಷಕರು ಪ್ರೋತ್ಸಾಹಿಸಬೇಕು. ಭಾಷೆ ಉಳಿದರೆ ಸಂಸ್ಕೃತಿಯೂ ಉಳಿಯಲಿದೆ ಎಂದರು.

ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ನಗರದಲ್ಲಿ ಕನ್ನಡವನ್ನು ಧಿಕ್ಕರಿಸುವ ಬೆಳವಣಿಗೆಯನ್ನು ಕಾಣುತ್ತೇವೆ. ಕನ್ನಡದಲ್ಲೇ ಶಿಕ್ಷಣ ನೀಡಲು ಆದ್ಯತೆ ನೀಡಬೇಕು. ಉತ್ತಮ ಶಬ್ದ ಬಳಕೆಯೂ ಸಾಹಿತ್ಯ ಎಂದರು.

ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕೇಶವ ಭಟ್ ಎನ್., ಪುತ್ತೂರು ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರೀವೇಣಿ, ಕಡಬ ತಾ.ಪಂ. ಆಡಳಿತಾಧಿಕಾರಿ ಸೀತಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮೇದಪ್ಪ ಗೌಡ, ನೆಟ್ಟಣ ಧರ್ಮಗುರು ಅಬ್ದುಲ್ ಜಲೀಲ್ ಹರ್ಷದಿ, ರಾಜ್ಯ ಯುವಜನ ಸಂಘಗಳ ಒಕ್ಕೂಟದ ಪ್ರ.ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಗ್ರಾ.ಪಂ. ಅಧ್ಯಕ್ಷ ಶಿವಶಂಕರ್, ಸ್ವಾಗತ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಮೋಂಟಡ್ಕ ಇದ್ದರು.

ಕೃಷ್ಣ ಶರ್ಮ ಪಿ.ಎಸ್. ಸ್ವಾಗತಿಸಿದರು. ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ಸೇಸಪ್ಪ ರೈ ರಾಮಕುಂಜ ಪ್ರಾಸ್ತಾವಿಕ ಮಾತನಾಡಿದರು. ನಾರಾಯಣ ಟಿ.ಭಟ್ ಸಮ್ಮೇಳನಾಧ್ಯಕ್ಷರ ಪರಿಚಯಿಸಿದರು. ಹಿರಿಯಣ್ಣ ಗೌಡ ವಂದಿಸಿದರು. ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT