ಕಡಬ (ಉಪ್ಪಿನಂಗಡಿ): ಗ್ರಾಮ ಪಂಚಾ ಯಿತಿ ಆಡಳಿತ ವ್ಯಾಪ್ತಿಯಲ್ಲಿದ್ದಾಗ ಪ್ರಶಸ್ತಿಗೆ ಕಾರಣವಾಗಿದ್ದ ಕಡಬದ ತ್ಯಾಜ್ಯ ವಿಲೇವಾರಿ ಘಟಕಗಳು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬಂದ ಬಳಿಕ ಅವ್ಯ ವಸ್ಥೆಯ ಆಗರವಾಗಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂಬ ದೂರು ವ್ಯಕ್ತವಾಗಿದೆ.

ಕಡಬ ಗ್ರಾಮ ಪಂಚಾಯಿತಿ ಆಡಳಿತ ವ್ಯಾಪ್ತಿಯಲ್ಲಿದ್ದಾಗ ಕೋಡಿಂಬಾಳ ಗ್ರಾಮದ ಕಕ್ಕೆತ್ತಿಮಾರ್ನಲ್ಲಿ 2.80 ಎಕರೆಯಲ್ಲಿ ಸ್ವಚ್ಛ ಭಾರತ್ ಮತ್ತು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ನೆರವಿನಿಂದ ಸುಮಾರು ₹1 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಘನ ತ್ಯಾಜ್ಯ ಘಟಕವು ಉತ್ತಮ ನಿರ್ವಹಣೆಯೊಂದಿಗೆ, ಹಸಿ, ಒಣ ಕಸಗಳನ್ನು ಬೇರ್ಪಡಿಸಿ ತ್ಯಾಜ್ಯಗಳಿಂದ ವ್ಯವಸ್ಥಿತವಾಗಿ ಗೊಬ್ಬರ ತಯಾರಿಸಿ ಮಾರಾಟ ಮಾಡಿ ಪಂಚಾಯಿತಿಗೆ ವರಮಾನ ಸಿಗುವಂತಾಗಿತ್ತು. ಸ್ವಚ್ಛತೆಯ ವಿಚಾರದಲ್ಲಿ ಪ್ರಶಸ್ತಿಗೂ ಭಾಜನವಾಗಿತ್ತು.

ಅಂದು ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಈಗಿನ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ನೀಲಾವತಿ ಶಿವರಾಮ್ ಸ್ವಚ್ಛತೆಯ ರಾಯಭಾರಿ ಅಧ್ಯಕ್ಷೆ ಎನ್ನುವ ಮನ್ನಣೆಗೆ ಪಾತ್ರರಾಗಿದ್ದರು. ಮಾದರಿ ಘಟಕಗಳನ್ನು ವೀಕ್ಷಿಸಲು ಜಿಲ್ಲೆ, ರಾಜ್ಯ, ಹೊರ ರಾಜ್ಯಗಳಿಂದಲೂ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಭೇಟಿ ನೀಡುತ್ತಿದ್ದರು. ಬಳಿಕ ದ್ರವ ತ್ಯಾಜ್ಯ ಘಟಕ ನಿರ್ವಹಣೆಯಿಲ್ಲದೆ ಮೂಲೆ ಗುಂಪಾದರೆ, ಘನ ತ್ಯಾಜ್ಯ ಘಟಕ ದುಃಸ್ಥಿತಿಗೆ ಬಂದು ನಿಂತಿದೆ. ಘಟಕಕ್ಕೆ ಖರೀದಿಸಲಾಗಿರುವ ವಾಹನಗಳು ಹಾಗೂ ಸಲಕರಣೆಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಕೆಲವು ಸಲಕರಣೆಗಳು ಕಸದಡಿ ಬಿದ್ದಿವೆ. ಸ್ವಚ್ಛತಾ ಸಿಬ್ಬಂದಿ ಹಾಗೂ ಚಾಲಕರ ನೇಮಕ ಸಾಧ್ಯವಾಗಿಲ್ಲ.

ಪರಿಸರದಲ್ಲಿ ಗಬ್ಬು ವಾಸನೆ: ಘಟಕದಲ್ಲಿ ಕಸ ರಾಶಿ ಬಿದ್ದು ಪರಿಸರದಲ್ಲಿ ದುರ್ವಾಸನೆ ಬೀರುತ್ತಿದೆ. ಕಡಬ ಪೇಟೆಯ ಅಂಗಡಿಮನೆ ಕಾಲೊನಿ ಪಕ್ಕದಲ್ಲಿರುವ ದ್ರವತ್ಯಾಜ್ಯ ನಿರ್ವಹಣ ಘಟಕ ಕೆಲಸ ನಿಲ್ಲಿಸಿ ವರ್ಷಗಳೇ ಕಳೆದಿವೆ. ಘಟಕದ ಅವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಸ್ಥಳೀಯರು ಕಸ ಸಾಗಾಟ ವಾಹನವನ್ನು ತಡೆದು ಪ್ರತಿಭಟಿಸಿದ್ದರು. ಆ ಬಳಿಕ ಕಸ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

ಅಧಿಕಾರಿಗಳ ನಿರ್ಲಕ್ಷ: 2019ರಿಂದ 2025ರ ಮಧ್ಯೆ ಜನಪ್ರತಿನಿಧಿಗಳಿಲ್ಲದೆ ಆಡಳಿತಾಧಿಕಾರಿಯ ಅವಧಿಯಲ್ಲಿ ತ್ಯಾಜ್ಯ ಘಟಕಗಳು ನಿರ್ಲಕ್ಷ್ಯಕ್ಕೆ ಒಳಗಾಗಿ ಇಂದು ಈ ಅವ್ಯವಸ್ಥೆಗೆ ಕಾರಣವಾಗಿದೆ. ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು 8 ತಿಂಗಳಷ್ಟೇ ಆಗಿದೆ. ತ್ಯಾಜ್ಯ ಘಟಕದ ಸಮಸ್ಯೆ ಬಗೆಹರಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ. ಹನೀಫ್ ಪ್ರತಿಕ್ರಿಯಿಸಿದ್ದಾರೆ.

ತೆರವು ಕಾರ್ಯ ನಡೆಯುತ್ತಿದೆ: ಪೌರ ಕಾರ್ಮಿಕರ ಕೊರತೆಯಿಂದಾಗಿ ಘನ ತ್ಯಾಜ್ಯ ಘಟಕದಲ್ಲಿ ಅವ್ಯವಸ್ಥೆ ಆಗಿದೆ. 13 ಮಂದಿ ಅಗತ್ಯ ಇರುವ ಘಟಕದಲ್ಲಿ ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರ ನೇಮಕಾತಿಗೆ ಅನುಮತಿ ದೊರೆಯುತ್ತಿಲ್ಲ. ಅಡೆತಡೆಗಳ ನಡುವೆಯೂ ಘಟಕದಲ್ಲಿ ರಾಶಿ ಬಿದ್ದಿರುವ ಕಸದ ರಾಶಿಯನ್ನು ತೆರವು ಮಾಡುವ ಕಾರ್ಯ ಸಾಗುತ್ತಿದೆ. ಎಲ್ಲ ಕಸ ತೆರವು ಮಾಡಿ ಘಟಕದ ವ್ಯವಸ್ಥಿತ ನಿರ್ವಹಣೆಗೆ ಅಗತ್ಯ ಕೈಗೊಳ್ಳಲಾಗುವುದು ಎಂದು ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ಇ. ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-29-2007216839

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.