ಬಂಟ್ವಾಳ: 7 ವರ್ಷಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ.ಸಿ.ರೋಡಿನಲ್ಲಿ ಶಿಲಾನ್ಯಾಸ ನೆರವೇರಿಸಿದ್ದ ₹20 ಕೋಟಿ ವೆಚ್ಚದ ಕಡೇಶ್ವಾಲ್ಯ– ಅಜಿಲಮೊಗರು ಸಂಪರ್ಕಿಸುವ ‘ಸೌಹಾರ್ದ ಸೇತುವೆ’ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅವರ ಆಡಳಿತಾವಧಿಯಲ್ಲೇ ಲೋಕಾರ್ಪಣೆಗೊಳ್ಳಲಿದೆ’ ಎಂದು ಮುಖಂಡ ಬಿ. ರಮಾನಾಥ ರೈ ತಿಳಿಸಿದರು.

ಕಡೇಶ್ವಾಲ್ಯ– ಅಜಿಲಮೊಗರು ಸೌಹಾರ್ದ ಸೇತುವೆ ಕಾಮಗಾರಿಯನ್ನು ಬುಧವಾರ ವೀಕ್ಷಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸೇತುವೆಯು ಕಡೇಶ್ವಾಲ್ಯ ಮತ್ತು ಮಣಿನಾಲ್ಕೂರು ಗ್ರಾಮಗಳನ್ನು ಸಂಪರ್ಕಿಸುವುದರ ಜೊತೆಗೆ ಕಡೇಶ್ವಾಲ್ಯ ಲಕ್ಷ್ಮೀನರಸಿಂಹ ದೇವಾಲಯ, ಅಜಿಲಮೊಗರು ಬಾಬಾ ಫಕ್ರುದ್ದೀನ್ ದರ್ಗಾದ ಸಂಬಂಧ ಬೆಸೆಯುವ ಸೌಹಾರ್ದ ಸೇತುವೆಯಾಗಿ ಮೂಡಿ ಬಂದಿದೆ. ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟನೆಗೆ ಶೀಘ್ರ ದಿನ ನಿಗದಿಗೊಳಿಸುವುದಾಗಿ ಹೇಳಿದ್ದಾರೆ ಎಂದರು.

ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಬಾಕಿ ಉಳಿದಿರುವ ಪಂಜೆ ಮಂಗೇಶರಾಯ ಭವನ, ಕ್ರೀಡಾಂಗಣ ಮತ್ತಿತರ ಕನಸಿನ ಯೋಜನೆಗಳನ್ನು ಪೂರ್ಣಗೊಳಿಸಲು ಶ್ರಮಿಸುವುದಾಗಿ ತಿಳಿಸಿದರು.

ಬೀಜ ಮತ್ತು ಸಾವಯವ ಪ್ರಮಾಣೀಕರಣ ನಿಗಮ ಅಧ್ಯಕ್ಷೆ ಲಾವಣ್ಯ ಬಲ್ಲಾಳ್, ಬುಡಾ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ, ಪದ್ಮಶೇಖರ್ ಜೈನ್, ಅಬ್ಬಾಸ್ ಆಲಿ, ಸಂಪತ್ ಕುಮಾರ್ ಶೆಟ್ಟಿ, ಶಿವಪ್ಪ ಪೂಜಾರಿ ಹಟದಡ್ಕ, ಕಾಂಚಲಾಕ್ಷಿ, ಸಂಜೀವ ಪೂಜಾರಿ, ಪೂವಪ್ಪ ಪೂಜಾರಿ, ಈಶ್ವರ ಪೂಜಾರಿ, ಆದಂ ಕುಂಞ, ಸುರೇಶ್ ಜೋರಾ, ಚಿದಾನಂದ ಕಡೇಶ್ವಾಲ್ಯ, ಹರಿಶ್ಚಂದ್ರ ಕಡೇಶ್ವಾಲ್ಯ, ಯೂಸುಫ್ ಕರಂದಾಡಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-29-60028774

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.